ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ ವಿಮಾನ ನಿಲ್ದಾಣ ಆಧುನೀಕರಣ ಉಡುಗೊರೆ Search similar articles
ಸುಮಾರು 2700 ಕೋಟಿ ರೂಪಾಯಿಯ ಚೆನ್ನೈ ವಿಮಾನನಿಲ್ದಾಣ ಆಧುನೀಕರಣ ಯೋಜನೆಗೆ ಕೇಂದ್ರವು ಅನುಮೋದನೆ ನೀಡಿದ್ದು, ಈ ಮೂಲಕ ವಿಶ್ವಾಸಮತದಲ್ಲಿ ಯುಪಿಎ ಪರ ಬೆಂಬಲ ನೀಡಿದ ಡಿಎಂಕೆ ಪಕ್ಷಕ್ಕೆ ಯುಪಿಎ ಉಡುಗೊರೆಯೊಂದನ್ನು ನೀಡಿದಂತಾಗಿದೆ.

ಸುಮಾರು 70 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರ ಸಾಮರ್ಥ್ಯದ ಎರಡು ಟರ್ಮಿನಲ್‌ಗಳನ್ನು ಚೆನ್ನೈ ವಿಮಾನ ನಿಲ್ದಾಣ ಹೊಂದಲಿದ್ದು, ದೇಶೀಯ ಟರ್ಮಿನಲ್ ವಾರ್ಷಿಕವಾಗಿ ಒಂದು ಕೋಟಿ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಲಿದೆ.

ಎರಡನೇ ರನ್‌ವೇಯನ್ನು ದೊಡ್ಡ ವಿಮಾನಗಳು ಹಾಗೂ ಹತ್ತು ನೂತನ ವಿಮಾನಗಳನ್ನು ನಿಭಾಯಿಸುವಷ್ಟು ವೃದ್ಧಿಗೊಳಿಸಲಾಗುವುದು.

ಅಂಡರ್‌ಗ್ರೌಂಡ್ ಮೆಟ್ರೋಲೈನ್ ಮತ್ತು ಉತ್ತಮ ಹೈವೇ ಸಂಪರ್ಕವನ್ನು ಚೆನ್ನೈ ವಿಮಾನನಿಲ್ದಾಣವು ಹೊಂದಲಿದ್ದು, ಈ ಯೋಜನೆಗಾಗಿ ರಾಜ್ಯ ಸರಕಾರವು 130 ಎಕರೆ ಪ್ರದೇಶವನ್ನು ಮತ್ತು ಹೆಚ್ಚುವರಿ 21 ಎಕರೆ ರಕ್ಷಣಾ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ಆರ್ಥಿಕ ವ್ಯವಹಾರಗಳ ಸಂಸತ್ ಸಮಿತಿಯಿಂದ ಅಂತಿಮ ಸ್ಪಷ್ಟನೆಯನ್ನು ನಿರೀಕ್ಷಿಸಲಾಗುತ್ತಿದೆ.
ಮತ್ತಷ್ಟು
ಜನಪ್ರಿಯಗೊಳ್ಳುತ್ತಿರುವ ರಿಟೈಲ್ ಆಹಾರೋದ್ಯಮ
ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ
ರೇಪೋ ದರ ಏರಿಕೆ: ಬ್ಯಾಂಕ್ ಬಡ್ಡಿದರ ಹೆಚ್ಚಳ ಸಾಧ್ಯತೆ
ಇಪಿಎಫ್ ನಿರ್ವಹಣಾ ಆಯ್ಕೆಗೆ ಸಭೆ
ಆರ್‌ಬಿಐ ರೇಪೋದರದಲ್ಲಿ 50 ಅಂಶ ಹೆಚ್ಚಳ
ಸ್ಥಗಿತಗೊಳ್ಳುವ ಹಂತದಲ್ಲಿ ಡಬ್ಲ್ಯೂಟಿಒ ಮಾತುಕತೆ?