ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಹಾರ ಭದ್ರತೆಗೆ ಕೇಂದ್ರದಿಂದ 231 ಕೋಟಿ ರೂ Search similar articles
ಪ್ರಸಕ್ತ ಮಾನ್ಸೂನ್ ಅವಧಿಯಲ್ಲಿ ದವಸಧಾನ್ಯ ಮತ್ತು ಅಕ್ಕಿಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಮಿಶನ್(ಎನ್ಎಫ್ಎಸ್ಎಂ) ಜಾರಿಗೆ ತರಲು ಕೇಂದ್ರವು ಎಲ್ಲಾ ರಾಜ್ಯಗಳಿಗೆ 231 ಕೋಟಿ ರೂಪಾಯಿ ಅನುಮೋದನೆ ನೀಡಿದೆ. ಈ ಹಿಂದೆ ವೆಚ್ಚದ ಮಾಡದೇ ಉಳಿದ 118.95 ಕೋಟಿ ರೂಪಾಯಿಗಳಿಗೆ ಹೆಚ್ಚುವರಿ 123.02 ಕೋಟಿ ರೂಪಾಯಿ ಸೇರಿಸಲಾಗಿದೆ.

2008-09ರ ಮೊದಲ ಕಂತಿನಲ್ಲಿ ಮೊತ್ತವು 231 ಕೋಟಿ ರೂಪಾಯಿಗಳಾಗಿದ್ದು, ಉಳಿದ ಮೊತ್ತವನ್ನು ನಂತರ ಬಿಡುಗಡೆಗೊಳಿಸಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿವೆ.

ಗುಜರಾತ್, ಹರಿಯಾಣ, ಕರ್ನಾಟಕ, ಪಂಜಾಬ್, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು 2007ರಲ್ಲಿ ವ್ಯಯಿಸದೆ ಉಳಿದಿರುವ ಮೊತ್ತವನ್ನು ಹೊಂದಿರುವುದರಿಂದ ಮತ್ತು ಒಟ್ಟು ಮೊತ್ತದ ಪ್ರಮಾಣವು 2008ರ ಅನುಮೋದಿತ ಮೊತ್ತಕ್ಕಿಂತ ಹೆಚ್ಚಾಗಿರುವುದರಿಂದ ಈ ರಾಜ್ಯಗಳಿಗೆ ನೂತನ ಹಂಚಿಕೆಯನ್ನು ಮಾಡಲಾಗುವುದಿಲ್ಲ ಎಂದು ಈ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಆರು ರಾಜ್ಯಗಳಲ್ಲಿ 2007ರಿಂದ ವೆಚ್ಚಮಾಡದೇ ಉಳಿದಿರುವಂತಹ ಮೊತ್ತದ ಪ್ರಮಾಣವು 20.41 ಕೋಟಿಗಳಾಗಿದ್ದು, ಮಾನ್ಸೂನ್ ಅವಧಿಯಲ್ಲಿನ ಅಕ್ಕಿ ಮತ್ತು ಬೇಳೆಕಾಳುಗಳಿಗಾಗಿ ವಿತರಣೆ ಮಾಡುವ ಮೊತ್ತದ ಪ್ರಮಾಣವು 9.87 ಕೋಟಿ ರೂಪಾಯಿಗಳಾಗಿವೆ. ಈ ರಾಜ್ಯಗಳಿಗೆ ವೆಚ್ಚಮಾಡದೇ ಉಳಿದಿರುವ ಮೊತ್ತವನ್ನು ಮುಂಗಾರು ಅವಧಿಯಲ್ಲಿ ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಆಮದು ಅವಲಂಬನೆ ಮತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ, 2010-11ರ ವೇಳೆಗೆ ಅಕ್ಕಿಯನ್ನು ಹತ್ತು ದಶಲಕ್ಷ ಟನ್, ಗೋಧಿ ಎಂಟು ದಶಲಕ್ಷ ಟನ್ ಮತ್ತು ದವಸಧಾನ್ಯ ಎರಡು ದಶಲಕ್ಷ ಟನ್ ಉತ್ಪಾದನೆ ಮಾಡುವ ಗುರಿಯೊಂದಿಗೆ, ಎನ್ಎಫ್ಎಸ್ಎಂ2007 ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಗೊಂಡಿತ್ತು.
ಮತ್ತಷ್ಟು
ಚೆನ್ನೈ ವಿಮಾನ ನಿಲ್ದಾಣ ಆಧುನೀಕರಣ ಉಡುಗೋರೆ
ಜನಪ್ರಿಯಗೊಳ್ಳುತ್ತಿರುವ ರಿಟೈಲ್ ಆಹಾರೋದ್ಯಮ
ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ
ರೇಪೋ ದರ ಏರಿಕೆ: ಬ್ಯಾಂಕ್ ಬಡ್ಡಿದರ ಹೆಚ್ಚಳ ಸಾಧ್ಯತೆ
ಇಪಿಎಫ್ ನಿರ್ವಹಣಾ ಆಯ್ಕೆಗೆ ಸಭೆ
ಆರ್‌ಬಿಐ ರೇಪೋದರದಲ್ಲಿ 50 ಅಂಶ ಹೆಚ್ಚಳ