ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗರಿಷ್ಠ ವೇತನದ ಮಹಿಳಾ ಸಿಇಒ ಇಂದಿರಾ ನೂಯಿ Search similar articles
ಸುಮಾರು 500 ಪ್ರಮುಖ ಅಮೆರಿಕ ಕಂಪನಿಗಳಲ್ಲಿ ಸಿಇಒ ವೇತನವು ಕಡಿಮೆಗೊಳ್ಳುತ್ತಿರುವ ಪ್ರವೃತ್ತಿಯನ್ನು ಮೆಟ್ಟಿನಿಲ್ಲುವ ಮೂಲಕ, ಪೆಪ್ಸಿ ಕಂಪನಿಯ ಮುಖ್ಯಸ್ಥೆ ಭಾರತೀಯ ಮೂಲದ ಇಂದಿರಾ ನೂಯಿ ಅತಿ ಹೆಚ್ಚಿ ವೇತನ ಪಡೆಯುವ ಮಹಿಳಾ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

4.5 ದಶಲಕ್ಷ ಡಾಲರ್ ಬೋನಸ್ ವೇತನದೊಂದಿಗೆ, ನೂಯಿ ಅವರು ಒಟ್ಟು 12.7 ದಶಲಕ್ಷ ವೇತನವನ್ನು ಪಡೆದುಕೊಳ್ಳುತ್ತಿದ್ದು, 500 ಕಂಪನಿ ಸಿಇಒಗಳಲ್ಲಿ 139ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಫೋರ್ಬ್ ಪತ್ರಿಕೆ ವರದಿ ಮಾಡಿದೆ.

ಅಮೆರಿಕೆಯ ಪತ್ರಿಕೆಯು ಪ್ರಕಟಿಸಿರುವ ಪಟ್ಟಿಯಲ್ಲಿ 13 ಮಹಿಳಾ ಸಿಇಒಗಳ ವೇತನವು ಕಳೆದ ವರ್ಷಕ್ಕಿಂತ ಶೇ.27ರಷ್ಟು ಹೆಚ್ಚಾಗಿದೆ. ಆದರೆ, 500 ಕಂಪನಿಗಳ ಸಿಇಒ ವೇತನವು 2006ರಲ್ಲಿ ಶೇ.38ರಷ್ಟು ಏರಿಕೆಗೊಂಡರೆ, 2007ರಲ್ಲಿ ಅದರ ಪ್ರಮಾಣವು ಶೇ.15ಕ್ಕೆ ಇಳಿಕೆಗೊಂಡಿದೆ.

ಮಹಿಳಾ ಮತ್ತು ಪುರುಷ ಸಿಇಒಗಳ ವೇತನ ಪ್ರಮಾಣದಲ್ಲಿ ಹೆಚ್ಚಿನ ಅಂತರವಿಲ್ಲದಿದ್ದರೂ, ವೇತನ ಮತ್ತು ಬೋನಸ್‌ ಸೇರಿದಂತೆ 500 ಸಿಇಒಗಳ ಸರಾಸರಿ ವೇತನವು 12.8 ದಶಲಕ್ಷ ಡಾಲರ್‌ಗಳಾಗಿದ್ದು, ಇದು ಮಹಿಳಾ ಸಿಇಒಗಳ ಸರಾಸರಿ ವೇತನ 6.5 ದಶಲಕ್ಷ ಡಾಲರ್‌ಗಳಿಗಿಂತ ದ್ವಿಗುಣವಾಗಿದೆ.

ಅದಲ್ಲದೆ, ಫೋರ್ಬ್ ಪಟ್ಟಿಯಲ್ಲಿ ಅತಿ ಹೆಚ್ಚು ವೇತನ ಪಡೆಯುವ ಪುರುಷ ಸಿಇಒ ಒರಾಕಲ್‌ನ ಲ್ಯಾರಿ ಎಲ್ಲಿಸನ್ ಅವರ ವೇತನದ 1/14ರಷ್ಟು ವೇತನವನ್ನು ನೂಯಿ ಪಡೆದುಕೊಳ್ಳುತ್ತಿದ್ದಾರೆ.
ಮತ್ತಷ್ಟು
ಆಹಾರ ಭದ್ರತೆಗೆ ಕೇಂದ್ರದಿಂದ 231 ಕೋಟಿ ರೂ
ಚೆನ್ನೈ ವಿಮಾನ ನಿಲ್ದಾಣ ಆಧುನೀಕರಣ ಉಡುಗೊರೆ
ಜನಪ್ರಿಯಗೊಳ್ಳುತ್ತಿರುವ ರಿಟೈಲ್ ಆಹಾರೋದ್ಯಮ
ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ
ರೇಪೋ ದರ ಏರಿಕೆ: ಬ್ಯಾಂಕ್ ಬಡ್ಡಿದರ ಹೆಚ್ಚಳ ಸಾಧ್ಯತೆ
ಇಪಿಎಫ್ ನಿರ್ವಹಣಾ ಆಯ್ಕೆಗೆ ಸಭೆ