ಏಷ್ಯಾದ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತವು ಏಪ್ರಿಲ್ 2007- ಮೇ 2008 ರವರೆಗೆ 73,050 ಮಿಲಿಯನ್ ಯೂನಿಟ್‌ಗಳಷ್ಟು ವಿದ್ಯುತ್ ಕೊರತೆಯನ್ನು ಎದುರಿಸಿದೆ ಎಂದು ಆಂತರಿಕ ಅಧಿಕೃತ ಲೆಕ್ಕಪರಿಶೋಧನೆಯು ತಿಳಿಸಿದೆ.
ಭಾರತ ಅಮೆರಿಕ ಪರಮಾಣು ಒಪ್ಪಂದದಿಂದ ವಿದ್ಯುತ್ ಲಭ್ಯತೆಯು ಸಾಧ್ಯವಾಗುವ ನಿರೀಕ್ಷೆಯಿದ್ದರೂ, ಲೆಕ್ಕಪರಿಶೋಧಕರ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ವಿದ್ಯುತ್ ಬೇಡಿಕೆಯು 7,26,222 ಮಿಲಿಯನ್ ಯೂನಿಟ್‌ಗಳಷ್ಟಿದ್ದು, ಆದರೆ, 6,53,172 ಮಿಲಿಯನ್ ಯೂನಿಟ್‌ಗಳಷ್ಟೇ ವಿದ್ಯುತ್ ಪೂರೈಕೆ ಮಾಡಲಾಗಿದೆ.
ಬಿಹಾರ, ಗುಜರಾತ್, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಮತ್ತು ಉತ್ತರ ಪ್ರದೇಶಗಳಲ್ಲಿ ವಿದ್ಯುತ್ ಕೊರತೆಯ ಪ್ರಮಾಣವು ದಟ್ಟವಾಗಿದೆ.
ಆಂಧ್ರಪ್ರದೇಶ, ಅಸ್ಸಾಂ, ಚತ್ತೀಸ್‌ಗಢ, ದೆಹಲಿ, ಗೋವಾ, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಒಟ್ಟು ವಿದ್ಯುತ್ ಬೇಡಿಕೆಯ ಕನಿಷ್ಟಪಕ್ಷ ಶೇ.90ನ್ನು ಪೂರೈಸಿವೆ.
ಏಪ್ರಿಲ್ 2007ರಿಂದ ಫೆಬ್ರವರಿ 2008ರ ಅವಧಿಯಲ್ಲಿ 64,368 ಮಿಲಿಯನ್ ಯೂನಿಟ್‌ಗಳಷ್ಟು ವಿದ್ಯುತ್ ಕೊರತೆಯಿದ್ದು, ಮಾರ್ಚ್ 2008ರ ವೇಳೆಗೆ ಇದು 73050ಕ್ಕೆ ಏರಿಕೆ ಕಂಡಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
|