ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾತುಕತೆ ಸ್ಥಗಿತವಲ್ಲ 'ತಾತ್ಕಾಲಿಕ ಬಿಡುವು': ಕಮಲನಾಥ್ Search similar articles
ಡಬ್ಲ್ಯೂಟಿಒ ಮಾತುಕತೆಯಲ್ಲಿ ಆಮದು ಸಬ್ಸಿಡಿಯ ಕುರಿತಾಗಿ ಶ್ರೀಮಂತ ರಾಷ್ಟ್ರಗಳ ಕಠಿಣ ನಿಲುವನ್ನು ದೂಷಿಸಿರುವ ಭಾರತವು, ಜಾಗತಿಕ ವ್ಯಾಪಾರ ಮಾತುಕತೆಯ ಸ್ಥಗಿತವನ್ನು ತಾತ್ಕಾಲಿಕ ಬಿಡುವು ಎಂಬುದಾಗಿ ಪರಿಗಣಿಸಬೇಕು, ಡಬ್ಲ್ಯೂಟಿಒ ಮಾತುಕತೆಯ ನಿಲುಗಡೆ ಎಂಬುದಾಗಿ ಪರಿಗಣಿಸಬಾರದು ಎಂದು ಭಾರತ ಹೇಳಿದೆ.

ತಮ್ಮ ಕೃಷಿ ಕ್ಷೇತ್ರಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ತಾವೇ ವ್ಯಾಪಾರ ನಿಷೇಧವನ್ನು ಹೇರಿದ ಶ್ರೀಮಂತ ದೇಶಗಳಿಂದ ಆಮದು ಸಬ್ಸಿಡಿಯಿಂದ ರೈತರಿಗೆ ಪ್ರಬಲ ಸುರಕ್ಷತೆಯನ್ನು ಭಾರತವು ನಿರೀಕ್ಷಿಸಿತ್ತು ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಕಮಲನಾಥ್ ತಿಳಿಸಿದ್ದಾರೆ.

ವಿಶೇಷ ಸುರಕ್ಷತಾ ರಚನೆಯ ಹೊರತಾಗಿ ಉಳಿದ ವಿಚಾರಗಳಲ್ಲಿ ವಾಣಿಜ್ಯ ಸಚಿವರು ಒಮ್ಮತದ ಅಭಿಪ್ರಾಯವನ್ನೇ ಹೊಂದಿದ್ದರು ಎಂದು ನಾಥ್ ತಿಳಿಸಿದ್ದು, ಈ ಮಾತುಕತೆಯ ಸ್ಥಗಿತವನ್ನು ನಿಲುಗಡೆಯೆಂದು ಪರಿಗಣಿಸದೆ ತಾತ್ಕಾಲಿಕ ಬಿಡುವು ಎಂಬುದಾಗಿ ಪರಿಗಣಿಸುವಂತೆ ಪ್ರಧಾನ ನಿರ್ದೇಶಕರಿಗೆ ಒತ್ತಾಯಿಸಿರುವುದಾಗಿ ಅವರು ಹೇಳಿದ್ದಾರೆ.

ಸಬ್ಸಿಡಿ ಉತ್ಪನ್ನಗಳ ಆಮದು ವಿರುದ್ಧ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂದು ಕಮಲನಾಥ್ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ದೇಶದಲ್ಲಿ 73,050 ಮಿಲಿಯನ್ ಯೂನಿಟ್ ವಿದ್ಯುತ್ ಕೊರತೆ
ಮುರಿದುಬಿದ್ದ ಡಬ್ಲ್ಯೂಟಿಒ ಮಾತುಕತೆ
ಗರಿಷ್ಠ ವೇತನದ ಮಹಿಳಾ ಸಿಇಒ ಇಂದಿರಾ ನೂಯಿ
ಆಹಾರ ಭದ್ರತೆಗೆ ಕೇಂದ್ರದಿಂದ 231 ಕೋಟಿ ರೂ
ಚೆನ್ನೈ ವಿಮಾನ ನಿಲ್ದಾಣ ಆಧುನೀಕರಣ ಉಡುಗೊರೆ
ಜನಪ್ರಿಯಗೊಳ್ಳುತ್ತಿರುವ ರಿಟೈಲ್ ಆಹಾರೋದ್ಯಮ