ಗ್ರಾಮೀಣ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಪಡೆಯುವ ನಿಟ್ಟಿನಲ್ಲಿ, ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಬಾಡಿಗೆ ರಹಿತ ದೂರವಾಣಿ ಸೇವೆಯನ್ನು ನೀಡಲಿದೆ ಎಂದು ಸರಕಾರೀ ನಿಯಂತ್ರಿತ ಭಾರತ್ ಸಂಚಾರ್ ನಿಗಮ ಲಿ. ಹೇಳಿದೆ.
ಆಗಸ್ಟ್ ಒಂದರಿಂದ ಈ ಸೇವೆಯು ಪ್ರಾರಂಭಗೊಳ್ಳಲಿದ್ದು, 100 ಫೋನ್ ಲೈನ್ ಸಾಮರ್ಥ್ಯವನ್ನು ಹೊಂದಿರುವ ಗ್ರಾಮೀಣ ಟೆಲಿಫೋನ್ ಎಕ್ಸ್‌ಚೇಂಜ್‌ಗಳಿಗೆ ಮಾತ್ರವೇ ಇದು ಅನ್ವಯವಾಗಲಿದೆ ಎಂದು ಬಿಎಸ್ಎನ್ಎಲ್ ಪ್ರಧಾನ ನಿರ್ವಾಹಕ ಹರಿ ಶಂಕರ್ ಶರ್ಮ ತಿಳಿಸಿದ್ದಾರೆ.
ಎಸ್‌ಟಿಡಿ ಸೌಲಭ್ಯಕ್ಕಾಗಿ ಗ್ರಾಹಕರು ಭದ್ರತಾ ಮೊತ್ತವಾಗಿ 500 ರೂಪಾಯಿಗಳ ಠೇವಣಿ ಇಡಬೇಕಾಗಿದ್ದು, ಈ ಸೌಲಭ್ಯವನ್ನು ಗ್ರಾಹಕರು ಸ್ಥಗಿತಗೊಳಿಸಿದಾಗ ಈ ಹಣವನ್ನು ಹಿಂತಿರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
|