ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಲ್ಫ್: ಹಣದುಬ್ಬರದವಿದ್ದರೂ ತೈಲ ಆದಾಯ ಹೆಚ್ಚಳ Search similar articles
ತೈಲ ಉತ್ಪಾದನಾ ವಲಯದ ರಾಷ್ಟ್ರಗಳು ಅತಿ ಹೆಚ್ಚು ಹಣದುಬ್ಬರವನ್ನು ಹೊಂದಿದ್ದರೂ, ಮುಂದಿನ ಎರಡು ವರ್ಷಗಳಲ್ಲಿ ಗಲ್ಫ್ ತೈಲ ಆದಾಯವು ವಾರ್ಷಿಕವಾಗಿ 600 ಕೋಟಿ ಡಾಲರ್‌ಗೆ ಏರಲಿದೆ ಎಂದು ನೂತನ ವರದಿಗಳು ತಿಳಿಸಿವೆ.

ಪ್ರತಿದಿನದ ತೈಲ ಉತ್ಪಾದನಾ ಪ್ರಮಾಣವು ಈಗಿರುವ 17.5 ಮಿಲಿಯನ್ ಬ್ಯಾರೆಲ್‌ನಿಂದ 2010ರ ವೇಳೆಗೆ 20 ಮಿಲಿಯನ್ ಬ್ಯಾರಲ್‌ಗೆ ಏರಲಿದೆ. ಇದು ತೈಲ ಆದಾಯವನ್ನು 600 ಶತಕೋಟಿ ಡಾಲರ್‌ಗೆ ತಲುಪಿಸಲಿದೆ ಎಂದು ಗಲ್ಫ್ ಹಣಕಾಸು ಸಂಸ್ಥೆ, ಗಲ್ಫ್ ಸಹಕಾರ ಸಂಸ್ಥೆ(ಜಿಸಿಸಿ) ಮತ್ತು ಇಕನಾಮಿಕ್ ಔಟ್‌ಲುಕ್ ವರದಿಗಳು ಹೇಳಿವೆ.

ಗಲ್ಪ್‌ ಸಹಕಾರ ಸಂಸ್ಥೆಯು(ಜಿಸಿಸಿ) ಬಹ್ರೇನ್, ಕುವೈಟ್, ಓಮನ್, ಖತಾರ್, ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳನ್ನು ಒಳಗೊಂಡಿದೆ. ತೈಲ ಉತ್ಪಾದನೆ ಹೆಚ್ಚಳದ ಹೊರತಾಗಿ, ಈ ಪ್ರದೇಶದ ಸಿಮೆಂಟ್ ಉತ್ಪಾದನೆಯು 2010ರ ವೇಳೆಗೆ 100 ದಶಲಕ್ಷ ತಲುಪಲಿದೆ. ಅಲ್ಲದೆ, ಪೆಟ್ರೋಕೆಮಿಕಲ್ಸ್ ಮತ್ತು ನೈಸರ್ಗಿಕ ಅನಿಲದ ಉತ್ಪಾದನಾ ಪ್ರಮಾಣವು ಕೂಡಾ ಹೆಚ್ಚಳವಾಗಲಿದೆ ಎಂದು ವರದಿಗಳು ಹೇಳಿವೆ.
ಮತ್ತಷ್ಟು
ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಸೆನ್ನೆಲ್‌ ಬಾಡಿಗೆರಹಿತ ಸೇವೆ
ಮಾತುಕತೆ ಸ್ಥಗಿತವಲ್ಲ 'ತಾತ್ಕಾಲಿಕ ಬಿಡುವು': ಕಮಲನಾಥ್
ದೇಶದಲ್ಲಿ 73,050 ಮಿಲಿಯನ್ ಯೂನಿಟ್ ವಿದ್ಯುತ್ ಕೊರತೆ
ಮುರಿದುಬಿದ್ದ ಡಬ್ಲ್ಯೂಟಿಒ ಮಾತುಕತೆ
ಗರಿಷ್ಠ ವೇತನದ ಮಹಿಳಾ ಸಿಇಒ ಇಂದಿರಾ ನೂಯಿ
ಆಹಾರ ಭದ್ರತೆಗೆ ಕೇಂದ್ರದಿಂದ 231 ಕೋಟಿ ರೂ