ಭಾರತದ ಅತಿ ದೊಡ್ಡ ಸರಕಾರಿ ಕ್ಷೇತ್ರದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಂತಾರಾಷ್ಟ್ರೀಯ ನಿರ್ವಹಣೆಯನ್ನು ವೃದ್ಧಿಗೊಳಿಸಲು ನಿರ್ಧರಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಮೂರು ಪಟ್ಟು ಹೆಚ್ಚಳವನ್ನು ನಿರೀಕ್ಷಿಸುತ್ತಿದೆ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.
ಕಳೆದ ವರ್ಷ ಶೇ.ಏಳರಷ್ಟಿದ್ದ ಅಂತಾರಾಷ್ಟ್ರೀಯ ವ್ಯವಹಾರವು ಮುಂದಿನ ಐದು ವರ್ಷಗಳಲ್ಲಿ ಶೇ.25ಕ್ಕೆ ಏರುವ ನಿರೀಕ್ಷೆಯನ್ನು ಬ್ಯಾಂಕ್ ಹೊಂದಿರುವುದಾಗಿ ಕೆನಡಾದಲ್ಲಿ ಎಸ್‍ಬಿಐ ಡೆಬಿಟ್ ಕಾರ್ಡ್ ಅನಾವರಣದ ವೇಳೆ ಭಟ್ ತಿಳಿಸಿದರು.
ಅಂತಾರಾಷ್ಟ್ರೀಯ ವ್ಯವಹಾರದ ತನ್ನ ದೃಷ್ಟಿಯು ಭಾರತಕ್ಕೆ ಸಂಬಂಧಿಸಿದ್ದಾಗಿದೆ ಎಂದು ಭಟ್ ಹೇಳಿದ್ದಾರೆ.
ಎಸ್‌ಬಿಐ(ಕೆನಡಾ)ವು ಕೆನಡಿಯನ್ ಹೂಡಿಕೆದಾರರನ್ನು ಪ್ರೋತ್ಸಾಹಿಸುವುದರೊಂದಿಗೆ, ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಎನ್ಆರ್ಐಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ. ಇದರೊಂದಿಗೆ, ಭಾರತದಲ್ಲಿ ಸ್ವಂತ ಮನೆಗಾಗಿ ಎನ್ಆರ್ಐಗಳಿಗೆ ಗೃಹ ಸಾಲವನ್ನೂ ಬ್ಯಾಂಕ್ ನೀಡುತ್ತಿದೆ ಎಂದು ಅವರು ಹೇಳಿದರು.
|