ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೆ ಏರಲಿರುವ ವಿಮಾನ ಪ್ರಯಾಣ ದರ Search similar articles
ತೈಲ ಉದ್ಯಮ ಕಂಪನಿಗಳು ಜೆಟ್ ಇಂಧನ ಬೆಲೆಯನ್ನು ಶೇ. ಮೂರರಷ್ಟು ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ದೇಶೀಯ ವಿಮಾನಯಾನ ಸಂಸ್ಥೆಗಳಾದ ಜೆಟ್, ಕಿಂಗ್‌ಫಿಶರ್ ಮತ್ತು ಏರ್‌ಡೆಕ್ಕನ್ ಸಾಮಾನ್ಯ ವಿಮಾನ ಪ್ರಯಾಣದರಗಳನ್ನು ಹೆಚ್ಚಳ ಮಾಡಲು ನಿರ್ಧರಿಸಿವೆ.

ಜೆಟ್‌ನ ಇಕಾನಮಿ ಮತ್ತು ಬ್ಯುಸಿನೆಸ್ ವರ್ಗದ ದರವು ಕ್ರಮವಾಗಿ ಶೇ.10 ಮತ್ತು ಶೇ.5ರಷ್ಟು ಏರಿಕೆಗೊಳ್ಳಲಿದ್ದು, ಕಿಂಗ್‌ಫಿಶರ್ ಎಲ್ಲಾ ವರ್ಗದ ದರಗಳನ್ನು ಶೇ.10ರಷ್ಟು ಹೆಚ್ಚಳಗೊಳಿಸಲಿದೆ. ಒಟ್ಟಾಗಿ ಇಕಾನಮಿ ವರ್ಗದ ದರವು ರೂ.50ರಿಂದ ರೂ.1,000ದಷ್ಟು ಏರಲಿದೆ.

ಇತರ ಏರ್‌ಲೈನ್‌ಗಳಂತೆ ಏರ್ ಇಂಡಿಯಾ ಕೂಡಾ ದರ ಹೆಚ್ಚಿಸಲು ಚಿಂತನೆ ನಡೆಸುತ್ತಿದ್ದು, ಉಳಿದ ವಿಮಾನಗಳು ಏರಿಸಿದಷ್ಟೇ ಪ್ರಮಾಣದಲ್ಲಿ ದರವನ್ನು ಹೆಚ್ಚಳಗೊಳಿಸುವ ನಿರೀಕ್ಷೆಯಿದೆ.

ರೂ.6,775-ರೂ.13,120 ರೂಗಳಿಗೆ ದೊರಕುತ್ತಿದ್ದ ದೆಹಲಿ-ಮುಂಬಯಿ ಇಕಾನಮಿ ವರ್ಗದ ಟಿಕೆಟ್ ದರವು ರೂ.7,105-ರೂ.14,080ಕ್ಕೆ ಏರಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಏರ್‌ಲೈನ್ಸ್‌ಗಳು ಸುಮಾರು 10,000 ಕೋಟಿ ರೂಪಾಯಿ ನಷ್ಟವನ್ನು ಹೊಂದುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ, ಈ ನಷ್ಟವನ್ನು ಏರ್‌ಲೈನ್ಸ್‌ಗಳು ಗ್ರಾಹಕರ ಮೇಲೆ ಹೊರಿಸುವುದು ಸ್ಪಷ್ಟವಾಗಿದೆ.
ಮತ್ತಷ್ಟು
ಶೇ.11.98: ಮತ್ತೆ ಏರುಗತಿಯಲ್ಲಿ ಹಣದುಬ್ಬರ ದರ
ಇಂಡೇನ್ ಹೊಸ ಸಂಪರ್ಕ ತಾತ್ಕಾಲಿಕ ಸ್ಥಗಿತ
ಎಸ್‌ಬಿಐ ಅಂತಾರಾಷ್ಟ್ರೀಯ ವ್ಯವಹಾರ ವೃದ್ಧಿ ನಿರೀಕ್ಷೆ
ಗಲ್ಫ್: ಹಣದುಬ್ಬರದವಿದ್ದರೂ ತೈಲ ಆದಾಯ ಹೆಚ್ಚಳ
ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಸೆನ್ನೆಲ್‌ ಬಾಡಿಗೆರಹಿತ ಸೇವೆ
ಮಾತುಕತೆ ಸ್ಥಗಿತವಲ್ಲ 'ತಾತ್ಕಾಲಿಕ ಬಿಡುವು': ಕಮಲನಾಥ್