ದೇಶದ ಅತಿ ದೊಡ್ಡ ಗೃಹ ಸಾಲ ಸರಬರಾಜುದಾರರಾದ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು, ತಮ್ಮ ಗೃಹ ಸಾಲ ದರವನ್ನು ಶೇ.0.75ರಷ್ಟು ಏರಿಕೆಗೊಳಿಸಿವೆ.
ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಐಸಿಐಸಿಐ ತನ್ನ ಚಿಲ್ಲರೆ ನಿರಖು ಠೇವಣಿ ಬಡ್ಡಿ ದರವನ್ನು ಕೂಡ ಶೇ.0.75-1.00ರಷ್ಟು ಹೆಚ್ಚಳಗೊಳಿಸಲಿದ್ದು, ಇದು ಶುಕ್ರವಾರದಿಂದಲೇ ಜಾರಿಗೆ ಬರಲಿದೆ. ಅಲ್ಲದೆ, ಗೃಹ ಸಾಲ ಸೇರಿದಂತೆ ಗ್ರಾಹಕ ಸಾಲದರಗಳ ಫ್ಲೋಟಿಂಗ್ ಬಡ್ಡಿ ದರವನ್ನು ಶೇ.0.75ರಷ್ಟು ಹೆಚ್ಚಳಗೊಳಿಸಿರುವುದಾಗಿ ಬ್ಯಾಂಕ್ ಹೇಳಿದ್ದು, ಇದು ಗುರುವಾರದಿಂದಲೇ ಅನ್ವಯವಾಗುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕಿನ ಹೊಸ ಗ್ರಾಹಕರಿಗೆ, ಗೃಹಸಾಲದ ಫ್ಲೋಟಿಂಗ್ ಬಡ್ಡಿದರವು ಕನಿಷ್ಠ ಶೇ.11.75 ಆಗಲಿದ್ದು, ಫಿಕ್ಸೆಡ್ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಅದು ಶೇ.14ರಲ್ಲಿ ಇರುತ್ತದೆ.
ಐಸಿಐಸಿಐಯ ಗ್ರಾಹಕ ಸಾಲಗಳ ಫ್ಲೋಟಿಂಗ್ ಬಡ್ಡಿದರವು ಈಗಿರುವ ಶೇ.13.5ರಿಂದ ಶೇ.14.25ಕ್ಕೆ ಏರಲಿದೆ. ಫಿಕ್ಸೆಡ್ ಸಾಲ ದರಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಅಂದರೆ, 20 ವರ್ಷ ಅವಧಿಯ 20 ಲಕ್ಷ ರೂ. ಸಾಲಕ್ಕೆ ಗ್ರಾಹಕರು ಸಮಾನ ಮಾಸಿಕ ಕಂತು (ಇಎಂಐ)ಯಲ್ಲಿ ಸುಮಾರು 1000 ರೂ.ನಷ್ಟು ಹೆಚ್ಚು ತೆರಬೇಕಾಗುತ್ತದೆ.
|