ಪ್ರಮುಖ ಎಲೆಕ್ಟ್ರಾನಿಕ್ ಸಂಸ್ಥೆ ವೀಡಿಯೋಕಾನ್ ಸೆಪ್ಟೆಂಬರ್ ತಿಂಗಳೊಳಗೆ ಡಿಟಿಎಚ್ ಸೇವೆಯನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ ಎಂದು ವೀಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ತಿಳಿಸಿದ್ದಾರೆ.
ಇದರೊಂದಿಗೆ, ಕಂಪನಿಯು ತನ್ನ ಕೆಲವು ಉತ್ಪನ್ನಗಳ ಬೆಲೆಯನ್ನು ಹಂತಹಂತವಾಗಿ ಏರಿಸಲಿದೆ ಎಂದೂ ಅವರು ಹೇಳಿದ್ದಾರೆ.
ಏನೇ ಆದರೂ ಬೆಲೆ ಹೆಚ್ಚಳವು ಬೇಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಅವರು, ಸುಮಾರು ಶೇ.70ರಷ್ಟು ಗ್ರಾಹಕ ವಸ್ತುಗಳು ನಗದು ರೂಪದಲ್ಲಿ ಮಾರಾಟವಾದರೆ, ಶೇ. 30ರಷ್ಟು ಹಣಕಾಸು ಸೌಲಭ್ಯ ಮೂಲಕ ಮಾರಾಟವಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ನಡುವೆ, ಬಡ್ಡಿದರ ಹೆಚ್ಚಳವು ಬೇಡಿಕೆಯ ಮೇಲೆ ಯಾವುದೇ ಪ್ರಬಾವವನ್ನು ಬೀರುವುದಿಲ್ಲ. ಕೇವಲ ಬಂಡವಾಳ ವೆಚ್ಚವು ಆತಂಕಕಾರಿ ವಿಚಾರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|