ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿವಿಎಸ್ ಮೋಟಾರ್ಸ್ ಮಾರಾಟ ಪ್ರಮಾಣ ಹೆಚ್ಚಳ Search similar articles
ಪ್ರಮುಖ ದ್ವಿಚಕ್ರ ವಾಹನ ಸಂಸ್ಥೆಯಾದ ಟಿವಿಎಸ್ ಮೋಟಾರ್ ಕಂಪನಿ ಜುಲೈ ತಿಂಗಳಲ್ಲಿ 1,16,000 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.10.09ರಷ್ಟು ಅಭಿವೃದ್ಧಿ ಸಾಧಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಟಿವಿಎಸ್ 1,05,366 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಇದರಲ್ಲಿ ಮೋಟಾರ್ ಸೈಕಲ್ ಮಾರಾಟದ ಪ್ರಮಾಣವು 53,000 ಆಗಿದ್ದು, ಇದು ಕಳೆದ ವರ್ಷದ 44,392 ಗಿಂತ ಹೆಚ್ಚಾಗಿದೆ. ಈ ಮೂಲಕ ಶೇ.19.29ರಷ್ಟು ಪ್ರಗತಿ ಸಾಧಿಸಿದೆ ಎಂದು ಟಿವಿಎಸ್ ಮೋಟಾರ್ ಹೇಳಿಕೆಗಳು ತಿಳಿಸಿವೆ.

ಆದರೂ, ಸ್ಕೂಟರ್ ಮಾರಾಟದಲ್ಲಿ ಶೇ. 3.53ರಷ್ಟು ಇಳಿಕೆಯಾಗಿದ್ದು, ಪ್ರಸಕ್ತ ಅವಧಿಯಲ್ಲಿ 23,000 ಯೂನಿಟ್‌ಗಳಷ್ಟು ಸ್ಕೂಟರ್ ಮಾರಾಟ ಮಾಡಿದೆ. 2007 ಜುಲೈ ತಿಂಗಳಲ್ಲಿ 23,841 ಯೂನಿಟ್‌ಗಳಷ್ಟು ಮಾರಾಟ ಮಾಡಿತ್ತು.

ಈ ಅವಧಿಯಲ್ಲಿ ಕಂಪನಿಯ 17,000 ಯೂನಿಟ್‌ಗಳಷ್ಟು ರಫ್ತು ಮಾಡಿದ್ದು, ಕಳೆದ ವರ್ಷ ಇದೇ ಅವಧಿಯ 11,395 ಯೂನಿಟ್ ರಫ್ತಿಗೆ ಹೋಲಿಸಿದರೆ, ಟಿವಿಎಸ್ ರಫ್ತು ಪ್ರಮಾಣದಲ್ಲಿ ಶೇ.49.19ರಷ್ಟು ಹೆಚ್ಚಳ ಉಂಟಾಗಿದೆ.
ಮತ್ತಷ್ಟು
ವೀಡಿಯೋಕಾನ್‌ನಿಂದ ಡಿಟಿಎಚ್ ಸೇವೆ
ಎಚ್‌ಡಿಎಫ್‌ಸಿ, ಐಸಿಐಸಿಐ ಗೃಹ ಸಾಲ ಬಡ್ಡಿದರ ಹೆಚ್ಚಳ
ಮತ್ತೆ ಏರಲಿರುವ ವಿಮಾನ ಪ್ರಯಾಣ ದರ
ಶೇ.11.98: ಮತ್ತೆ ಏರುಗತಿಯಲ್ಲಿ ಹಣದುಬ್ಬರ ದರ
ಇಂಡೇನ್ ಹೊಸ ಸಂಪರ್ಕ ತಾತ್ಕಾಲಿಕ ಸ್ಥಗಿತ
ಎಸ್‌ಬಿಐ ಅಂತಾರಾಷ್ಟ್ರೀಯ ವ್ಯವಹಾರ ವೃದ್ಧಿ ನಿರೀಕ್ಷೆ