ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವೇಶ ಪರೀಕ್ಷೆಗಳಿಗೆ ಆನ್‌ಲೈನ್ ಕೋಚಿಂಗ್ Search similar articles
indiaprwire
ಅವಕಾಶ ಹೆಚ್ಚಳ, ಸಮಯ ಉಳಿತಾಯ ಮತ್ತು ಸುರಕ್ಷತಾ ವಿಚಾರಗಳಿಂದಾಗಿ ಆನ್‌ಲೈನ್ ಶಿಕ್ಷಣವು ಭಾರತದಲ್ಲಿ ಶೀಘ್ರಪಥದಲ್ಲಿ ಸಾಗುತ್ತಿದ್ದು, ಈ ಪ್ರವೃತ್ತಿಯನ್ನು ಗಮನದಲ್ಲಿರಿಸಿ ಹೈದರಾಬಾದಿನ ಆಪ್ಟ್ ಆಕಾಡಮಿ ಸೊಲ್ಯುಶನ್, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಸಿದ್ಧತೆಗಾಗಿ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.

ವಿಜ್ಐಕ್ಯೂ ಡಾಟ್ ಕಾಂ ಎಂಬ ಉಟಿತ ಆನ್‌ಲೈನ್ ಶಿಕ್ಷಣ ವೇದಿಕೆಯು ಕೋರ್ಸ್‌ನಲ್ಲಿ ಯಶಸ್ಸು ಸಾಧಿಸುವಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಲಿದೆ.

ಐಐಟಿ, ಎಐಇಇಇ, ಸಿಇಟಿ ಮತ್ತು ಇತರ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಗಣಿತ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳನ್ನು ಈ ಕೋರ್ಸ್ ಒಳಗೊಂಡಿದ್ದು, ಆಗಸ್ಟ್ ನಾಲ್ಕರಂದು ಪ್ರಾರಂಭಗೊಳ್ಳುವ ಈ ಕೋರ್ಸಿಗೆ ಈಗಾಗಲೇ ಸುಮಾರು 500 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.

ಪ್ರತಿ ವರ್ಷ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಇದರಲ್ಲಿ ಹೆಚ್ಚಿನವರು ದ್ವಿತೀಯ ಹಂತನಗರದವರಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಕೋಚಿಂಗ್‌ಗಾಗಿ ಅತಿ ಹೆಚ್ಚು ವೆಚ್ಚ ಮಾಡುವ ಮೂಲಕ ದೂರದ ನಗರಗಳಿಗೆ ಹೋಗಬೇಕಾಗುತ್ತದೆ. ಬೃಹತ್ ನಗರಗಳ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಜಾಮ್ ಮುಂತಾದ ಕೊರತೆಗಳಿರುತ್ತವೆ. ಪ್ರಸಕ್ತ ಸನ್ನಿವೇಶದಲ್ಲಿ, ಆನ್‌ಲೈನ್ ಶಿಕ್ಷಣವು ಉತ್ತಮ ವಿಧಾನವಾಗಿದೆ ಎಂದು ಆಪ್ಟ್ ಅಕಾಡೆಮಿ ಸೊಲ್ಯುಶನ್‌ನ ಪಂಕಜ್ ಕುಮಾರ್ ಹೇಳುತ್ತಾರೆ.

ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲು ನೇರ ಆಡಿಯೋ ವೀಡಿಯೋ ಸಂಪರ್ಕ, ಚಾಟ್ ಮುಂತಾದ ಸೌಲಭ್ಯಗಳನ್ನು ಹೊಂದಿರುವುದರಿಂದ ಈ ಕೋರ್ಸ್‌ಗಳಿಗೆ ವಿಜಿಐಕ್ಯೂ ಡಾಟ್ ಕಾಂನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ಟಿವಿಎಸ್ ಮೋಟಾರ್ಸ್ ಮಾರಾಟ ಪ್ರಮಾಣ ಹೆಚ್ಚಳ
ವೀಡಿಯೋಕಾನ್‌ನಿಂದ ಡಿಟಿಎಚ್ ಸೇವೆ
ಎಚ್‌ಡಿಎಫ್‌ಸಿ, ಐಸಿಐಸಿಐ ಗೃಹ ಸಾಲ ಬಡ್ಡಿದರ ಹೆಚ್ಚಳ
ಮತ್ತೆ ಏರಲಿರುವ ವಿಮಾನ ಪ್ರಯಾಣ ದರ
ಶೇ.11.98: ಮತ್ತೆ ಏರುಗತಿಯಲ್ಲಿ ಹಣದುಬ್ಬರ ದರ
ಇಂಡೇನ್ ಹೊಸ ಸಂಪರ್ಕ ತಾತ್ಕಾಲಿಕ ಸ್ಥಗಿತ