ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನ್ಯ ಬ್ಯಾಂಕ್‌ಗಳ ಎಟಿಎಂ ನಿಶ್ಶುಲ್ಕ ಬಳಕೆ ಯೋಜನೆ Search similar articles
ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿತ ಬ್ಯಾಂಕಿಂಗ್ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯು ಪ್ರಾರಂಭಿಸಿರುವ ನ್ಯಾಷನಲ್ ಫೈನಾನ್ಷಿಯಲ್ ಸ್ವಿಚ್ (ಎನ್ಎಫ್ಎಸ್‌) ವ್ಯವಸ್ಥೆಗೆ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೈಜೋಡಿಸಿದ್ದು, ಈ ಯೋಜನೆ ಮೂಲಕ ಅನ್ಯ ಬ್ಯಾಂಕ್‌ಗಳ ಎಟಿಎಂಗಳನ್ನು ಗ್ರಾಹಕರು ಯಾವುದೇ ಶುಲ್ಕವಿಲ್ಲದೆ ಬಳಸಬಹುದಾಗಿದೆ.

ಎಟಿಎಂ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಸಾಮಾನ್ಯ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಎನ್ಎಫ್ಎಸ್ ಬ್ಯಾಂಕ್‌ಗಳಿಗೆ ಸಹಕಾರ ನೀಡುತ್ತದೆ. ಎನ್ಎಫ್ಎಸ್ ನೆಟ್ವರ್ಕ್ ಹೊಂದಿದ ಬ್ಯಾಂಕಿನ ಗ್ರಾಹಕರು ಇತರ ಬ್ಯಾಂಕಿನ ಎಟಿಎಂಗಳನ್ನು ಹೆಚ್ಚುವರಿ ಶುಲ್ಕ ನೀಡದೆಯೇ ಉಪಯೋಗಿಸಬಹುದಾಗಿದೆ ಎಂದು ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ರಿಸರ್ವ್ ಬ್ಯಾಂಕ್ ಉಪ ಗವರ್ನರ್ ವಿ.ಲೀಲಾಧರ್ ತಿಳಿಸಿದ್ದಾರೆ.

ಮೂರು ಸರಕಾರಿ ವಲಯ ಬ್ಯಾಂಕುಗಳು ಎನ್ಎಫ್ಎಸ್‌ನೊಂದಿಗೆ ಕೈಜೋಡಿಸಲು ಸಿದ್ಧವಾಗಿದ್ದು, ಈ ಸೇವೆಯನ್ನು ಪ್ರಾರಂಭಿಸಲು ಅಗತ್ಯವಿರುವ ತಂತ್ರಜ್ಞಾನ ವೇದಿಕೆಯನ್ನು ರಚಿಸುವಲ್ಲಿ ತೊಡಗಿಕೊಂಡಿವೆ ಎಂದು ಲೀಲಾಧರ್ ಹೇಳಿದ್ದಾರೆ.

ದೇಶೀಯ ಬ್ಯಾಂಕಿಂಗ್ ಪದ್ಧತಿಗಳಲ್ಲಿನ ಕ್ರೆಡಿಟ್ ಕಾರ್ಡ್ ದೋಷಗಳು ಆತಂಕಕಾರಿಯಾಗಿದ್ದು, ಈ ವಿಚಾರವನ್ನು ಬ್ಯಾಂಕುಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿರುವ ಅವರು,ಆದರೆ, ಕ್ರೆಡಿಟ್ ಕಾರ್ಡ್ ದೋಷಗಳ ಹೊರತಾಗಿಯೂ ಕ್ರೆಡಿಟ್ ಕಾರ್ಡ್ ಬೇಡಿಕೆಯಲ್ಲಿ ಯಾವುದೇ ಇಳಿಮುಖ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಪ್ರವೇಶ ಪರೀಕ್ಷೆಗಳಿಗೆ ಆನ್‌ಲೈನ್ ಕೋಚಿಂಗ್
ಟಿವಿಎಸ್ ಮೋಟಾರ್ಸ್ ಮಾರಾಟ ಪ್ರಮಾಣ ಹೆಚ್ಚಳ
ವೀಡಿಯೋಕಾನ್‌ನಿಂದ ಡಿಟಿಎಚ್ ಸೇವೆ
ಎಚ್‌ಡಿಎಫ್‌ಸಿ, ಐಸಿಐಸಿಐ ಗೃಹ ಸಾಲ ಬಡ್ಡಿದರ ಹೆಚ್ಚಳ
ಮತ್ತೆ ಏರಲಿರುವ ವಿಮಾನ ಪ್ರಯಾಣ ದರ
ಶೇ.11.98: ಮತ್ತೆ ಏರುಗತಿಯಲ್ಲಿ ಹಣದುಬ್ಬರ ದರ