ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ಎಲ್‌ಪಿಜಿ ಸಂಪರ್ಕ ನೀಡಲು ಸರಕಾರ ಸೂಚನೆ Search similar articles
ಐಒಸಿ ಮುಂತಾದ ಸಂಸ್ಥೆಗಳಿಂದ ಸ್ಥಗಿತಗೊಂಡಿದ್ದ ನೂತನ ಎಲ್‌ಪಿಜಿ ಸಂಪರ್ಕ ವಿತರಣೆಯನ್ನು ಪ್ರಾರಂಭಿಸುವಂತೆ ಸರಕಾರವು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸೂಚನೆ ನೀಡಿದೆ.

ಎಲ್‌ಪಿಜಿ ಸಂಪರ್ಕಕ್ಕಾಗಿ ಕಾದಿರುವ ಗ್ರಾಹಕರ ಪಟ್ಟಿ ಪರಿಶೀಲನೆ ನಡೆಸಲು, ಮೂರು ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ನೂತನವಾಗಿ ಆಯ್ಕೆಗೊಂಡ ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ ತಿಳಿಸಿದ್ದಾರೆ.

ನೂತನ ಎಲ್‌ಪಿಜಿ ಸಂಪರ್ಕ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸುವಂತೆ ಮತ್ತು ಮುಂದಿನ ಎರಡು ತಿಂಗಳುಗಳೊಳಗೆ ಬಾಕಿ ಇರುವ ಸುಮಾರು 2.5 ಲಕ್ಷ ಗ್ರಾಹಕರಿಗೆ ಎಲ್‌ಪಿಜಿ ವಿತರಣೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಪಾಂಡಿ ಕಂಪನಿಗಳಿಗೆ ಸೂಚಿಸಿದ್ದಾರೆ.

ಈ ವಿಚಾರದ ಕುರಿತಾಗಿ ಸಚಿವಾಲಯದಲ್ಲಿ ವಿಮರ್ಶೆ ನಡೆಸಲಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳಿಂದ ಎಲ್‌ಪಿಜಿ ಸಂಪರ್ಕ ಬಿಡುಗಡೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಕಂಪನಿಗಳು ನೂತನ ಎಲ್‌ಪಿಜಿ ಸಂಪರ್ಕವನ್ನು ವಿತರಣೆ ಮಾಡಬಹುದಾಗಿದೆ ಎಂದು ಸಚಿವಾಲಯದ ಹೇಳಿಕೆಗಳು ತಿಳಿಸಿವೆ.

ಎಲ್‌ಪಿಜಿ ಸಿಲಿಂಡರ್ ಸೇರಿದಂತೆ ನೂತನ ಸಾಧನಗಳನ್ನು ಖರೀದಿಸಲು ಕಂಪನಿಯು ಅಶಕ್ತವಾಗಿರುವುದರಿಂದ ತತ್ಕಾಲಕ್ಕೆ ನೂತನ ಸಂಪರ್ಕ ವಿತರಣೆಯನ್ನು ನಿಲುಗಡೆಗೊಳಿಸಲಾಗುವುದು ಎಂದು ಜುಲೈ 30ರಂದು ಐಒಸಿ ಮುಖ್ಯಸ್ಥ ಸಾರ್ಥಕ್ ಬಹುರಿಯಾ ತಿಳಿಸಿದ್ದರು.

ಪ್ರತಿ ಎಲ್‌ಪಿಜಿ ಮಾರಾಟದಲ್ಲಿ ಕಂಪನಿಗೆ ಉಂಟಾಗುತ್ತಿರುವ 338 ರೂ. ನಷ್ಟದಿಂದಾಗಿ ಕಂಪನಿಗೆ ಈ ನಿರ್ಧಾರ ತಾಳಲು ಪ್ರಚೋದನೆ ನೀಡಿತ್ತು.
ಮತ್ತಷ್ಟು
ಅನ್ಯ ಬ್ಯಾಂಕ್‌ಗಳ ಎಟಿಎಂ ನಿಶ್ಶುಲ್ಕ ಬಳಕೆ ಯೋಜನೆ
ಪ್ರವೇಶ ಪರೀಕ್ಷೆಗಳಿಗೆ ಆನ್‌ಲೈನ್ ಕೋಚಿಂಗ್
ಟಿವಿಎಸ್ ಮೋಟಾರ್ಸ್ ಮಾರಾಟ ಪ್ರಮಾಣ ಹೆಚ್ಚಳ
ವೀಡಿಯೋಕಾನ್‌ನಿಂದ ಡಿಟಿಎಚ್ ಸೇವೆ
ಎಚ್‌ಡಿಎಫ್‌ಸಿ, ಐಸಿಐಸಿಐ ಗೃಹ ಸಾಲ ಬಡ್ಡಿದರ ಹೆಚ್ಚಳ
ಮತ್ತೆ ಏರಲಿರುವ ವಿಮಾನ ಪ್ರಯಾಣ ದರ