ಗಗನಕ್ಕೇರುತ್ತಿರುವ ಕಚ್ಚಾತೈಲ ಬೆಲೆಯಿಂದಾಗಿ ಭಾರತದ ತೈಲ ಆಮದು ಪ್ರಮಾಣವು ಶೇ.53.4ರಷ್ಟು ಏರಿಕೆಗೊಂಡಿದ್ದು, ಪ್ರಸಕ್ತ ಹಣಕಾಸು ವರ್ಷದ ಜೂನ್ ತಿಂಗಳಲ್ಲಿ 9.03 ಶತಕೋಟಿ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಲಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಭಾರತವು 5.89 ಶತಕೋಟಿ ಡಾಲರ್‌ಗಳಷ್ಟು ಮೌಲ್ಯದ ತೈಲವನ್ನು ಆಮದು ಮಾಡಿಕೊಂಡಿತ್ತು.
2008-9ರ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ತೈಲ ಆಮದು 16.99 ಶತಕೋಟಿ ಡಾಲರ್‍ನಿಂದ 25.52 ಶತಕೋಟಿ ಡಾಲರ್‌ಗೆ ತಲುಪುವ ಮೂಲಕ ತೈಲ ಆಮದು ಪ್ರಮಾಣವು ಶೇ.50.2ಕ್ಕೆ ಏರಿಕೆಗೊಂಡಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಏಪ್ರಿಲ್-ಜೂನ್ ಅವಧಿಯಲ್ಲಿ ದೇಶದ ವ್ಯಾಪಾರ ಕೊರತೆಯು ಶೇ.41.2ರಷ್ಟು ಹೆಚ್ಚಳಗೊಳ್ಳಲು ತೈಲ ಆಮದು ಕಾರಣ ಎಂದು ಕಂಡುಕೊಳ್ಳಲಾಗಿದೆ.
ಪ್ರಸಕ್ತ, ಏಶಿಯನ್ ಮಾರುಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಕಚ್ಛಾತೈಲ ಬೆಲೆಯು ಪ್ರತಿ ಬ್ಯಾರಲ್‌ಗೆ 123.35ರಷ್ಟಿದ್ದು, ಕಳೆದ ತಿಂಗಳು ಇದು 147 ಡಾಲರ್‌ಗೆ ಏರಿತ್ತು.
|