ಪ್ರಸಕ್ತ ಮೊಬೈಲ್ ಸೇವಾ ಸರಬರಾಜು ಕಂಪನಿಯ ಸೇವೆಗಳಿಂದ ಗ್ರಾಹಕರು ಅತೃಪ್ತರಾಗಿದ್ದಲ್ಲಿ, ಮೊಬೈಲ್ ಸಂಖ್ಯೆಯನ್ನು ಬದಲಿಸದೇ ಮೊಬೈಲ್ ಸೇವೆ ಒದಗಿಸುವ ಕಂಪನಿಯನ್ನು ಬದಲಾಯಿಸುವ ಅವಕಾಶವು ಶೀಘ್ರದಲ್ಲೇ ಬರಲಿದೆ.
ಎಂಎನ್‌ಪಿಯ ಈ ಸೌಲಭ್ಯವನ್ನು ಸರಕಾರವು ಮುಂದಿನ ಎರಡು ತಿಂಗಳಲ್ಲಿ ನಾಲ್ಕು ಮೆಟ್ರೋ ನಗರಗಳಲ್ಲಿ ಮತ್ತು ಮುಂದಿನ 6-16 ತಿಂಗಳುಗಳಲ್ಲಿ ಉಳಿದ ನಗರಗಳಲ್ಲಿ ಪ್ರಾರಂಭಿಸಲಿದೆ ಎಂದು ಟೆಲಿಕಾಂ ಸಚಿವ ಎ.ರಾಜಾ ತಿಳಿಸಿದ್ದಾರೆ.
ಎರಡು ಮೆಟ್ರೋ ವಲಯ ಮತ್ತು 11 ಸೇವಾ ಪ್ರದೇಶ ಸೇರಿದಂತೆ ಸರಕಾರದ ಸಲಹಾಸೂತ್ರದ ಪ್ರಕಾರ, ದೇಶವನ್ನು ಎರಡು ಎಂಎನ್‌ಪಿ ವಲಯಗಳಾಗಿ ವಿಭಾಗಿಸಲಾಗಿದೆ.
ನೆಟ್ ವರ್ಕ್ ಸಮಸ್ಯೆಯನ್ನು ಎದುರಿಸುತ್ತಿರುವ ಗ್ರಾಹಕರು ನೆಟ್ ವರ್ಕ್ ಸಮರ್ಪಕವಾಗಿರುವ ಟೆಲಿಕಾಂ ಸಂಸ್ಥೆಗಳನ್ನು ಆಯ್ಕೆ ಮಾಡಬಹುದಾಗಿದ್ದು, ಸಂಖ್ಯೆಯ ಬದಲಾವಣೆ ಉಂಟಾಗುವುದಿಲ್ಲ ಎಂದು ರಾಜಾ ತಿಳಿಸಿದ್ದಾರೆ.
|