ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೃಹ ಸಾಲ ಉದ್ಯಮದತ್ತ ಟಾಟಾ Search similar articles
ಭಾರತದ ಪ್ರಮುಖ ಸಂಸ್ಥೆಯಾಗಿರುವ ಟಾಟಾ ಸಮೂಹವು, ಸ್ಪರ್ಧಾತ್ಮಕವಾಗಿರುವ ಮತ್ತು ಆಕರ್ಷಕವಾಗಿರುವ ಗೃಹ ಸಾಲ ಉದ್ಯಮದತ್ತ ಗಮನವನ್ನು ಹರಿಸಿದೆ. ಈಗಾಗಲೇ ಈ ಕ್ಷೇತ್ರದಲ್ಲಿರುವವರಿಗಿಂತಲೂ ಉತ್ತಮ ಸೇವೆ ಮತ್ತು ಆಕರ್ಷಕ ಬಡ್ಡಿದರಗಳಲ್ಲಿ ಸಾಲ ವಿತರಿಸುವುದು ಇದರ ಯೋಜನೆಯಾಗಿದೆ.

ಸಮೂಹದ ಹಣಕಾಸು ಸೇವಾ ವಿಭಾಗವಾದ ಟಾಟಾ ಕ್ಯಾಪಿಟಲ್ ಅತಿ ಶೀಘ್ರದಲ್ಲಿಯೇ, ತಾನು ಗೃಹ ಸಾಲ ವ್ಯವಹಾರವನ್ನು ಆರಂಭಿಸಲು, ನ್ಯಾಷನಲ್ ಹೌಸಿಂಗ್ ಬೋರ್ಡ್‌ಗೆ ಅರ್ಜಿಯನ್ನು ಸಲ್ಲಿಸಲಿದೆ.

"ನಮಗೆ ಎಲ್ಲಾ ರೀತಿಯ ಒಪ್ಪಿಗೆಗಳೂ ದೊರೆತ ನಂತರ, ಮಾರ್ಚ್ 2009ರಿಂದ ಗೃಹ ಸಾಲ ವ್ಯವಹಾರವನ್ನು ಆರಂಭಿಸಲಿದ್ದೇವೆ" ಎಂದು ಟಾಟಾ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ಪ್ರವೀಣ್ ಪಿ.ಕಡ್ಲೆ ತಿಳಿಸಿದರು.

ಟಾಟಾ ಕ್ಯಾಪಿಟಲ್ ತನ್ನ ಕಾರ್ಯಾಚರಣೆಯನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರಂಭಿಸಿತು. ಆದರೆ ಗ್ರಾಹಕ ಹಣಕಾಸು ವ್ಯವಹಾರವನ್ನು ಫೆಬ್ರವರಿ 2008ರಿಂದ ಆರಂಭಿಸಿದೆ ಎಂದು ಕಡ್ಲೆ ತಿಳಿಸಿದರು.

ಈಗ ಇತರ ಕಂಪನಿಗಳು ನೀಡುವ ದರಕ್ಕಿಂತಲೂ, ತಮ್ಮ ಗೃಹ ಸಾಲದ ಬಡ್ಡಿ ದರ ಕಡಿಮೆ ಇರುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ವ್ಯತ್ಯಾಸವಂತೂ ಇದ್ದೇ ಇರುತ್ತದೆ. ಬೇರೆಯವರಿಗಿಂತಲೂ ಆಕರ್ಷಕವಾಗಿರುತ್ತದೆ ಎಂದು ತಿಳಿಸಿದರು.
ಮತ್ತಷ್ಟು
ಶೀಘ್ರವೇ ಏಕರೂಪ ಮೊಬೈಲ್ ಸಂಖ್ಯೆ ಲಭ್ಯತೆ: ಟೆಲಿಕಾಂ
ಎಎಐನಲ್ಲಿ ಬಾಕಿ ಇಲ್ಲ: ಜೆಟ್ ಏರ್‌ವೇಯ್ಸ್
ಭಾರತದ ತೈಲ ಆಮದು ಶೇ.53.2ರಷ್ಟು ಹೆಚ್ಚಳ
ಹೊಸ ಎಲ್‌ಪಿಜಿ ಸಂಪರ್ಕ ನೀಡಲು ಸರಕಾರ ಸೂಚನೆ
ಅನ್ಯ ಬ್ಯಾಂಕ್‌ಗಳ ಎಟಿಎಂ ನಿಶ್ಶುಲ್ಕ ಬಳಕೆ ಯೋಜನೆ
ಪ್ರವೇಶ ಪರೀಕ್ಷೆಗಳಿಗೆ ಆನ್‌ಲೈನ್ ಕೋಚಿಂಗ್