ಭಾರತದ ಅತಿ ದೊಡ್ಡ ಆನ್‌ಲೈನ್ ಮಾರುಕಟ್ಟೆ ಈಬೇಯು ಪ್ರತಿ ನಿಮಿಷಕ್ಕೊಂದು ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದು, ಈ ಮೂಲಕ ಭಾರತದಲ್ಲಿ ಇಂಟರ್ನೆಟ್ ಶಾಪಿಂಗ್ ಪ್ರಮಾಣವು ಏರುಗತಿಯಲ್ಲಿದೆ.
ಆನ್‌ಲೈನ್ ಶಾಪಿಂಗ್‌ನಲ್ಲಿ ಮಾರಾಟವಾಗುವ ಉತ್ಪನ್ನಗಳು ಸಾಫ್ಟ್‌ವೇರ್ ಅಥವಾ ಕಂಪ್ಯೂಟರ್ ಸಂಬಂಧಿ ಉತ್ಪನ್ನಗಳಲ್ಲ. ಬದಲಾಗಿ, ಈಬೇಯಲ್ಲಿ ಆಭರಣ ವಸ್ತುಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ ಎಂದು ಅಮೆರಿಕ ಮೂಲದ ಇಂಟರ್ನೆಟ್ ಹರಾಜು ಮತ್ತು ಮಾರುಕಟ್ಟೆ ಸಂಸ್ಥೆ ಈಬೇಯ ಭಾರತೀಯ ನಿರ್ವಾಹಕ ಅಂಬರೀಶ್ ಮೂರ್ತಿ ತಿಳಿಸಿದ್ದಾರೆ.
ಇದಲ್ಲದೆ, ಈಬೇ ಮೂಲಕ ಖರೀದಿಸುವ ಶೇ.70-75ರಷ್ಟು ಮಂದಿಯು 25-30 ವಯಸ್ಸಿನೊಳಗಿನವರಾಗಿದ್ದಾರೆ.
ಇಂಟರ್ನೆಟ್ ಶಾಪಿಂಗ್‌ನಲ್ಲಿ, ಪುರುಷ ಗ್ರಾಹಕರು ಎಲೆಕ್ಟ್ರಾನಿಕ್ ಉತ್ಪನ್ನ ಖರೀದಿಗೆ ಹೆಚ್ಚು ಆಸಕ್ತಿ ತೋರಿದರೆ, ಮಹಿಳಾ ಗ್ರಾಹಕರು ಆಭರಣ ಖರೀದಿಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂಬುದಾಗಿ ಪುರುಷ ಮತ್ತು ಮಹಿಳೆಯರ ನಡುವಿನ ಖರೀದಿಯ ಪ್ರವೃತ್ತಿಯನ್ನು ಮೂರ್ತಿ ವಿವರಿಸುತ್ತಾರೆ.
ಉಳಿದಂತೆ, ನಾಣ್ಯಗಳು, ಮೊಬೈಲ್ ಫೋನ್, ಸ್ಟಾಂಪ್, ಪುಸ್ತಕ, ಮ್ಯೂಸಿಕ್ ಪ್ಲೇಯರ್, ವಾಚ್ ಮುಂತಾಗ ಉತ್ಪನ್ನಗಳು ಅತಿ ಹೆಚ್ಚು ಖರೀದಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಈಬೇಯಲ್ಲಿ ಪ್ರತಿ ಏಳು ನಿಮಿಷಕ್ಕೊಂದು ಆಭರಣವು ಮಾರಾಟವಾಗುತ್ತಿದ್ದು, ನಾಣ್ಯವು 16 ನಿಮಿಷಕ್ಕೊಂದರಂತೆ ಮಾರಾಟವಾಗುತ್ತದೆ. ಉಳಿದಂತೆ, ಸ್ಟಾಂಪ್ 19 ನಿಮಿಷ, ಪುಸ್ತಕಗಳು ಪ್ರತಿ 27 ನಿಮಿಷಕ್ಕೊಂದು ಮಾರಾಟವಾಗುತ್ತದೆ ಎಂದು ಈಬೇ ಅಂಕಿಅಂಶಗಳು ತಿಳಿಸಿವೆ.
|