ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ: ಮಧ್ಯಮವರ್ಗದ ಮನರಂಜನಾ ವೆಚ್ಚ ಇಳಿಕೆ Search similar articles
ಗಗನಕ್ಕೇರುತ್ತಿರುವ ಹಣದುಬ್ಬರದಿಂದಾಗಿ ಮಧ್ಯಮವರ್ಗದ ಕುಟುಂಬಗಳು ಮನರಂಜನೆ, ಹೋಟೇಲ್, ಶಾಪಿಂಗ್ ಮುಂತಾದ ಸುಮಾರು ಶೇ.49ರಷ್ಟು ಖರ್ಚುಗಳನ್ನು ಕಡಿತಗೊಳಿಸಿದ್ದು, ಏನೇ ಆದರೂ, ತಂಬಾಕು ಉತ್ಪನ್ನಗಳ ವೆಚ್ಚವನ್ನು ಕಡಿಮೆಗೊಳಿಸಿಲ್ಲ ಎಂದು ಅಸೋಚಂ ವರದಿಗಳು ತಿಳಿಸಿವೆ.

ನಗರಗಳಲ್ಲಿ ಮಧ್ಯಮ ಮತ್ತು ಹೆಚ್ಚು ಆದಾಯ ಗುಂಪಿನ ಸುಮಾರು 3,000 ಕುಟುಂಬಗಳ ಪ್ರತಿಕ್ರಿಯೆಯನ್ನು ಆಧರಿಸಿ ಜುಲೈ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆ, ಅನಗತ್ಯ ಖರ್ಚುಗಳನ್ನು ಮಿತಿಗೊಳಿಸುವುದು ಮುಂತಾದ ಸಲಹೆಯನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ನೀಡಿದ್ದಾರೆ.

ಶೇ.ಏಳರಿಂದ ಶೇ.11ಕ್ಕೇರಿದ ಹಣದುಬ್ಬರದಿಂದಾಗಿ, ಮಧ್ಯಮವರ್ಗವು ಸುಮಾರು 5,000-6,000ದಷ್ಟು ಫ್ಯಾನ್ಸಿ ಶಾಪಿಂಗ್, ಮನರಂಜನೆ ಮುಂತಾದವುಗಳ ವೆಚ್ಚವನ್ನು ರೂ.2,800ಕ್ಕೆ ಇಳಿಸಿರುವುದಾಗಿ ಸಮೀಕ್ಷೆಯಿಂದ ತಿಳಿದುಬಂದಿದೆ.

ಏನೇ ಆದರೂ, ಹೆಚ್ಚು ಆದಾಯ ಪಂಗಡಗಳ ವೆಚ್ಚದಲ್ಲೇನು ಕಡಿತ ಉಂಟಾಗಿಲ್ಲ. ಉನ್ನತ ವರ್ಗದ ಕುಟುಂಬಗಳು ಸಿನಿಮಾ, ಸಂಗೀತ ಸೇರಿದಂತೆ ಮನರಂಜನೆಗಾಗಿ ಪ್ರತಿ ತಿಂಗಳಿಗೆ ಸುಮಾರು 20,000ದಷ್ಟು ವೆಚ್ಚ ಮಾಡುತ್ತಾರೆ .

ಏತನ್ಮಧ್ಯೆ, ಗುಟ್ಕಾ, ಪಾನ್ ಮಸಾಲಾ, ಸಿಗರೇಟ್ ಮುಂತಾದವುಗಳಿಗೆ ಪ್ರತಿ ತಿಂಗಳಿಗೆ ರೂ.400-1000ದಷ್ಟು ವೆಚ್ಚಮಾಡುತ್ತಿದ್ದ ಪುರುಷರು, ಇದರಲ್ಲಿ ಯಾವುದೇ ತ್ಯಾಗವನ್ನು ಮಾಡಿಲ್ಲ ಎಂದು ವರದಿಗಳು ಸ್ಪಷ್ಟಪಡಿಸಿವೆ.

ಇದಲ್ಲದೆ, ಆಭರಣ, ಬ್ಯೂಟಿ ಪಾರ್ಲರ್ ಮುಂತಾದ ಮಹಿಳೆಯರ ವೆಚ್ಚಕ್ಕೂ ಯಾವುದೇ ತಡೆ ಉಂಟಾಗಿಲ್ಲ ಎಂದು ಅಸೋಚಂ ವರದಿಗಳು ತಿಳಿಸಿವೆ.
ಮತ್ತಷ್ಟು
ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಪ್ರಮಾಣ ಹೆಚ್ಚಳ
ಹೋಟೆಲ್ ತಿಂಡಿಗೂ ಕತ್ತರಿ ಹಾಕಿದ ಹಣದುಬ್ಬರ
ಠೇವಣಿ ಬಡ್ಡಿ ದರ ಹೆಚ್ಚಳ
ಗೃಹ ಸಾಲ ಉದ್ಯಮದತ್ತ ಟಾಟಾ
ಶೀಘ್ರವೇ ಏಕರೂಪ ಮೊಬೈಲ್ ಸಂಖ್ಯೆ ಲಭ್ಯತೆ: ಟೆಲಿಕಾಂ
ಎಎಐನಲ್ಲಿ ಬಾಕಿ ಇಲ್ಲ: ಜೆಟ್ ಏರ್‌ವೇಯ್ಸ್