ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್‌ನಿಂದ ದೆಹಲಿಯಲ್ಲಿ ಜಿಎಸ್ಎಂ ಸೇವೆ Search similar articles
ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯನಿಕೇಶನ್ಸ್ ದೇಶದ ರಾಜಧಾನಿಯಲ್ಲಿ ಜಿಎಸ್ಎಂ ಸೇವೆಯನ್ನು ಪ್ರಾರಂಭಿಸಿದ್ದು, ಈ ಮೂಲಕ, ದೇಶದಲ್ಲಿ ಸಿಡಿಎಂಎ ಮತ್ತು ಜಿಎಸ್ಎಂ ಸೇವೆಯನ್ನು ನೀಡುವ ಮೊದಲ ಟೆಲಿಕಾಂ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಿಎಸ್ಎಂ ಸೇವೆಯನ್ನು ನೀಡಲು ಇತ್ತೀಚೆಗೆ ಸರಕಾರವು ಅನುಮತಿ ನೀಡಿರುವ ಬೆನ್ನಲ್ಲೇ, ಸಿಡಿಎಂಎ ಆಧಾರಿತ ಮೊಬೈಲ್ ಸೇವೆಯನ್ನು ರಿಲಯನ್ಸ್ ಕಮ್ಯುನಿಕೇಶನ್ಸ್ ನೀಡುತ್ತಿದೆ. ತನ್ನ ಮೊದಲ ಸೇವೆಯನ್ನು ನೀಡಲು ಕಂಪನಿಯು ದೆಹಲಿಯನ್ನು ಆಯ್ದುಕೊಂಡಿದೆ.

ಪ್ರಾರಂಭಿಕವಾಗಿ, ಮೊದಲ 1000 ಸಂಪರ್ಕಗಳನ್ನು ತನ್ನ ನೌಕರರಿಗೆ ನೀಡಲಾಗಿದ್ದು, ಪ್ರಾರಂಭಿಕ ಪರಿಣಾಮದ ನಂತರ ವಾಣಿಜ್ಯ ಆಧಾರದಲ್ಲಿ ಸೇವೆಯನ್ನು ವಿಸ್ತರಿಸಲಿದೆ ಎಂದು ರಿಲಯನ್ಸ್ ಕಮ್ಯುನಿಕೇಶನ್ಸ್ ಮೂಲಗಳು ತಿಳಿಸಿವೆ.

ಈ ಸೇವೆಯನ್ನು ದೇಶದ ಇತರ ಭಾಗಗಳಲ್ಲಿ ಪ್ರಾರಂಭಿಸುವ ಬಗ್ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್, ಎಲ್ಲಾ ವಲಯಗಳಲ್ಲಿ ಕಂಪನಿಯು ನೆಟ್ವರ್ಕ್ ಪ್ರಾರಂಭಿಸಲಿದ್ದು, ನೆಟ್ವರ್ಕ್ ಸಿದ್ಧಗೊಂಡ ನಂತರ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದೆ.

ಜಿಎಸ್ಎಂ ಸೇವೆಯ ಪ್ರಾರಂಭವು ಪ್ರತಿ ತಿಂಗಳು ಏಳು ಮಿಲಿಯನ್ ಗ್ರಾಹಕರ ಹೆಚ್ಚಳದ ಗುರಿಯನ್ನು ಸಾಧಿಸಲು ಸಹಾಯಕವಾಗಲಿದೆ ಎಂದು ರಿಲಯನ್ಸ್ ತಿಳಿಸಿದೆ.
ಮತ್ತಷ್ಟು
ಹಣದುಬ್ಬರ: ಮಧ್ಯಮವರ್ಗದ ಮನರಂಜನಾ ವೆಚ್ಚ ಇಳಿಕೆ
ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಪ್ರಮಾಣ ಹೆಚ್ಚಳ
ಹೋಟೆಲ್ ತಿಂಡಿಗೂ ಕತ್ತರಿ ಹಾಕಿದ ಹಣದುಬ್ಬರ
ಠೇವಣಿ ಬಡ್ಡಿ ದರ ಹೆಚ್ಚಳ
ಗೃಹ ಸಾಲ ಉದ್ಯಮದತ್ತ ಟಾಟಾ
ಶೀಘ್ರವೇ ಏಕರೂಪ ಮೊಬೈಲ್ ಸಂಖ್ಯೆ ಲಭ್ಯತೆ: ಟೆಲಿಕಾಂ