ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ಕಿ ರಫ್ತು ನಿಷೇಧ ಹಿಂತೆಗೆತಕ್ಕೆ ಸರಕಾರ ಚಿಂತನೆ Search similar articles
ಭತ್ತ ಉತ್ಪಾದನೆಯ ವ್ಯಾಪ್ತಿಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆಫ್ರಿಕನ್ ರಾಷ್ಟ್ರಗಳಿಗೆ ಸುಮಾರು ಮೂರು ದಶಲಕ್ಷ ಟನ್‌ಗಳಷ್ಟು ಬಾಸ್ಮತಿಯೇತರ ಅಕ್ಕಿ ರಫ್ತಿಗೆ ನವೆಂಬರ್ ತಿಂಗಳಿನಿಂದ ಅನುಮತಿ ನೀಡಲು ಸರಕಾರ ನಿರ್ಧರಿಸಿದೆ.

ಹಣದುಬ್ಬರ ನಿಯಂತ್ರಣ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸಕ್ತ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಸರಕಾರ ನಿಷೇಧ ಹೇರಿದೆ.

ನಿಷೇಧವನ್ನು ಸಂಪೂರ್ಣ ಹಿಂತೆಗೆದುಕೊಳ್ಳದಿದ್ದರೂ, ನವೆಂಬರ್ ತಿಂಗಳ ನಂತರ ಸುಮಾರು ಎರಡರಿಂದ ಮೂರು ದಶಲಕ್ಷ ಟನ್ ಅಕ್ಕಿಯನ್ನು ಆಫ್ರಿಕನ್ ರಾಷ್ಟ್ರಗಳಿಗೆ ರಫ್ತು ಮಾಡಬಹುದು ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ ತಿಂಗಳಲ್ಲಿ 94 ದಶಲಕ್ಷ ಟನ್ ಬಾಸ್ಮತಿಯೇತರ ಅಕ್ಕಿ ಉತ್ಪಾದನೆಯನ್ನು ನಿರೀಕ್ಷಿಸಲಾಗುತ್ತಿದ್ದು, ಇದರಲ್ಲಿ ಆರು ದಶಲಕ್ಷ ಟನ್ ಉಳಿತಾಯವಾಗಿದೆ. ಭಾರತದಲ್ಲಿ ಬೇಸಿಗೆ ಅವಧಿಯಲ್ಲಿ 23.13 ದಶಲಕ್ಷ ಹೆಕ್ಟೇರುಗಳಲ್ಲಿ ಭತ್ತ ಬೆಳೆಸಲಾಗಿದ್ದು, ಕಳೆದ ವರ್ಷ 20.76 ದಶಲಕ್ಷ ಹೆಕ್ಟೇರುಗಳಲ್ಲಿ ಬೆಳಸಲಾಗಿತ್ತು. ಇದನ್ನು ಗಮನಿಸಿದರೆ, ಅಕ್ಕಿ ಉತ್ಪಾದನೆಯ ಪ್ರಮಾಣದಲ್ಲಿ ಶೇ.11ರಷ್ಟು ಏರಿಕೆ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ, ಬಾಸ್ಮತಿಯೇತರ ಅಕ್ಕಿ ರಫ್ತಿನ ನಿಷೇಧವನ್ನು ಹಿಂತೆಗೆಯುವಂತೆ ರಫ್ತುದಾರರು ಒತ್ತಾಯಿಸುತ್ತಿದ್ದು, ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಸಲುವಾಗಿ ರಫ್ತು ನಿಷೇಧವನ್ನು ಹೇರುವ ಬದಲು ರಫ್ತು ಪ್ರಮಾಣವನ್ನು ಕಡಿಮೆಗೊಳಿಸಲಿ ಎಂದು ಸಲಹೆ ನೀಡಿದ್ದಾರೆ.
ಮತ್ತಷ್ಟು
ರಿಲಯನ್ಸ್‌ನಿಂದ ದೆಹಲಿಯಲ್ಲಿ ಜಿಎಸ್ಎಂ ಸೇವೆ
ಹಣದುಬ್ಬರ: ಮಧ್ಯಮವರ್ಗದ ಮನರಂಜನಾ ವೆಚ್ಚ ಇಳಿಕೆ
ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಪ್ರಮಾಣ ಹೆಚ್ಚಳ
ಹೋಟೆಲ್ ತಿಂಡಿಗೂ ಕತ್ತರಿ ಹಾಕಿದ ಹಣದುಬ್ಬರ
ಠೇವಣಿ ಬಡ್ಡಿ ದರ ಹೆಚ್ಚಳ
ಗೃಹ ಸಾಲ ಉದ್ಯಮದತ್ತ ಟಾಟಾ