ಜಾಗತಿಕ ತೈಲ ಬೆಲೆಯಲ್ಲಿ ಇಳಿಕೆ, ಉತ್ತಮ ಮುಂಗಾರು ಮುಂತಾದ ಅಂಶಗಳಿಂದ ಹಣದುಬ್ಬರವು ಶೇ.ಎಂಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷ ಸಿ.ರಂಗರಾಜನ್ ತಿಳಿಸಿದ್ದಾರೆ.
ಬೆಲೆಗಳ ಮೇಲೆ ಉತ್ತಮ ಮುಂಗಾರು ಪ್ರಭಾವದ ಕುರಿತಾಗಿ ವಿವರಿಸಿದ ರಂಗರಾಜನ್, ಜುಲೈನಲ್ಲಿ ಮಳೆಯ ಪ್ರಮಾಣದ ಇಳಿಕೆಯ ನಡುವೆಯೂ, ಉತ್ತಮ ಮುಂಗಾರು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದರೆ ಹಣದುಬ್ಬರವು ಶೇ.8-7ಕ್ಕೆ ಇಳಿಕೆಗೊಳ್ಳುವುದು ಪ್ರಾಯಶಃ ಕಷ್ಟಕರವೇ, ಆದರೆ, ಮಾರ್ಚ್ 2009ರೊಳಗೆ ಹಣದುಬ್ಬರವು ಇಳಿಯಲಿದೆ ಎಂದು ರಂಗರಾಜನ್ ಸೂಚಿಸಿದ್ದಾರೆ.
ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯು ಪ್ರಸಕ್ತ ಹಂತದಲ್ಲಿಯೇ ಮುಂದುವರಿಯುವ ಸಾಧ್ಯತೆಯಿದ್ದು, ಏನೇ ಆದರೂ, ತೈಲ ಬೆಲೆ ಇಳಿಕೆಯ ಪ್ರವೃತ್ತಿಯು ಮುಂದುವರಿದಲ್ಲಿ ಬೆಲೆಯಲ್ಲಿಯೂ ಇಳಿಕೆ ಉಂಟಾಗಲಿಗೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|