ಗ್ರಾಮೀಣ ಪ್ರದೇಶದ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಖಾಸಗಿ ಸರಕಾರಿ ಪಾಲುದಾರಿಕೆ ಆಧಾರದಲ್ಲಿ ಗ್ರಾಮೀಣ ವ್ಯವಹಾರ ಕೇಂದ್ರಗಳನ್ನು ಸ್ಥಾಪಿಸಲು ಪಂಚಾಯತ್ ರಾಜ್ ಸಚಿವಾಲಯವು ಭಾರತೀಯ ಉದ್ಯಮ ಒಕ್ಕೂಟ(ಸಿಐಐ)ದೊಂದಿಗೆ ಕೈಜೋಡಿಸಿದೆ.
ಗ್ರಾಮೀಣ ಉದ್ಯೋಗ, ವಿವಿಧ ಯೋಜನೆಗಳ ಮೂಲಕ ಮತ್ತು ಖಾದಿ ಮತ್ತು ಗ್ರಾಮೀಣ ಉದ್ಯಮ ಆಯೋಗ(ಕೆವಿಐಸಿ)ದ ಒಮ್ಮುಖದೊಂದಿಗೆ ಗ್ರಾಮೀಣ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಬೆಲೆ ಮುಂತಾದ ಗುರಿಯನ್ನು ಈ ಯೋಜನೆಯು ಹೊಂದಿದೆ.
ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆ(ಎಂಎಸ್ಎಂಇ)ಗಳಡಿಯಲ್ಲಿ ಸಿಐಐ ಮತ್ತು ಕೆವಿಐಸಿ ಪಂಚಾಯತ್ ರಾಜ್ ಸಚಿವಾಲಯದೊಂದಿಗೆ ಸಹಕರಿಸಲಿದೆ.
ಈ ಯೋಜನೆಯ ಕಾರ್ಯಗತಕ್ಕಾಗಿ ಆಯೋಗ ಮತ್ತು ಪಂಚಾಯತ್ ರಾಜ್ ಸಚಿವಾಲಯ ಹಾಗೂ ಸಿಐಐ ಹಾಗೂ ಕೆವಿಐಸಿ ನಡುವೆ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆವಿಐಸಿ ಯೋಜನೆಯಡಿಯಲ್ಲಿ ಬೆಂಬಲಿತವಾಗುವ ಸಂಭಾವ್ಯ ಯೋಜನೆಗಳನ್ನು ಪಂಚಾಯತ್ ರಾಜ್ ಮತ್ತು ಕೆವಿಐಸಿ ಕಂಡುಕೊಳ್ಳಲಿದೆ.
|