ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಿರುವ ಅಮೆರಿಕದ ಆರ್ಥಿಕ ಇಳಿಮುಖವು ಭಾರತದ ಮೇಲೆ ಸಂಭಾವ್ಯ ಪರಿಣಾಮ ಬೀರಲಿದೆ ಎಂದು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.
"ಅಮೆರಿಕದ ಆರ್ಥಿಕ ಇಳಿಮುಖವು ಗಮನಾರ್ಹವಾಗಿದ್ದು, ಇದರಿಂದ ಭಾರತವು ಪ್ರತಿರಕ್ಷಿತಗೊಳ್ಳುತ್ತದೆ ಎಂದು ನನಗನಿಸುವುದಿಲ್ಲ" ಎಂದು ರತನ್ ಟಾಟಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ, ಅಮೆರಿಕo ಈ ಪರಿಸ್ಥಿತಿಯು ಯುರೋಪ್ ಮೇಲೆ ಪರಿಣಾಮ ಬೀರುತ್ತಿದ್ದು, ಕ್ರಮೇಣ ಭಾರತಕ್ಕೂ ಇದರ ಬಿಸಿ ತಟ್ಟಲಿದೆ ಎಂದು ಟಾಟಾ ಕೆಮಿಕಲ್ಸ್‌ನ ವಾರ್ಷಿಕ ಮಹಾ ಸಭೆಯಲ್ಲಿ ಟಾಟಾ ಹೇಳಿದ್ದಾರೆ.
ಈ ನಡುವೆ, ಕಂಪನಿಯ ವಿದೇಶಿ ಸ್ವಾಧೀನದ ಕುರಿತಾಗಿ ಮಾತನಾಡಿದ ಅವರು, ಕಂಪನಿಯು ದೀರ್ಘಾವಧಿ ಪ್ರಯೋಜನವನ್ನು ಪಡೆದುಕೊಂಡಿದ್ದು, ಜಾಗತಿಕ ವ್ಯವಹಾರ ಜ್ಞಾನದೊಂದಿಗೆ ಕಚ್ಚಾಸಾಮಾಗ್ರಿಗಳ ಮೇಲೆ ನಿಯಂತ್ರಣ ಪಡೆದುಕೊಳ್ಳಲಿದೆ ಎಂದು ಟಾಟಾ ಹೇಳಿದ್ದಾರೆ.
ಇತ್ತೀಚೆಗೆ 4,036 ಕೋಟಿ ರೂಪಾಯಿಗಳ ಸಂಪೂರ್ಣ ಪ್ರಯೋಜನದೊಂದಿಗೆ, ಅಮೆರಿಕದ ಪ್ರಮುಖ ಸಂಸ್ಥೆ ಜನರಲ್ ಕೆಮಿಕಲ್ ಇಂಡಸ್ಟ್ರಿಯಲ್ ಪ್ರೊಡಕ್ಟ್ ಇಂಕ್(ಜಿಸಿಐಪಿ) ಅನ್ನು ಟಾಟಾ ಕೆಮಿಕಲ್ಸ್ ಸ್ವಾಧೀನಪಡಿಸಿಕೊಂಡಿತ್ತು.
|