ಮಂದ ಆರ್ಥಿಕತೆಯ ದೃಷ್ಟಿಕೋನದಿಂದಾಗಿ ಅಮೆರಿಕದಲ್ಲಿ ಬೇಡಿಕೆ ಕುಂಠಿತ ಮತ್ತು ಒಪಿಇಸಿಯ ಇಂಧನ ಉತ್ಪಾದನಾ ಹೆಚ್ಚಳದ ವರದಿಗಳ ಹಿನ್ನೆಲೆಯಲ್ಲಿ ಪೂರೈಕೆ ಕೊರತೆ ಆತಂಕವು ಕಡಿಮೆಗೊಂಡ ನಿಟ್ಟಿನಲ್ಲಿ ಮಂಗಳವಾರ ಜಾಗತಿಕ ಕಚ್ಚಾತೈಲ ಬೆಲೆಯು ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕಿಳಿದಿದೆ.
ಸೆಪ್ಟೆಂಬರ್ ತಿಂಗಳ ವಿತರಣೆಗಾಗಿರುವ ನೂಯಾರ್ಕ್‌ನ ಲೈಟ್ ಸ್ವೀಟ್ ಕಚ್ಚಾತೈಲವು 1.14ಡಾಲರ್‌ನಷ್ಟು ಇಳಿಕೆಗೊಂಡಿದ್ದು, ಬ್ಯಾರಲ್‌ಗೆ 120.27 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.
ಸೆಪ್ಟೆಂಬರ್ ತಿಂಗಳ ವಿತರಣೆಗಾಗಿರುವ ಲಂಡನ್‌ನ ಬ್ರೆಂಟ್ ಕಚ್ಚಾತೈಲವು ಬ್ಯಾರಲ್‌ಗೆ 119.65 ಡಾಲರ್ ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದು, 1.03 ಡಾಲರ್‌ನಷ್ಟು ಇಳಿಕೆಗೊಂಡಿದೆ.
ಜಗತ್ತಿನ ಅತಿ ದೊಡ್ಡ ತೈಲ ರಫ್ತು ರಾಷ್ಟ್ರವಾಗಿರುವ ಸೌದಿ ಅರೇಬಿಯಾದ ತೈಲ ಉತ್ಪಾದನೆಯಲ್ಲಿ ಹೆಚ್ಚಳ ಉಂಟಾಗಿರುವ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ಒಪಿಇಸಿಯ ಪೂರೈಕೆಯಲ್ಲಿ ಹೆಚ್ಚಳ ಉಂಟಾಗಿದೆ ಎಂದು ರಿಯಾಕ್ಟರ್ ಸಮೀಕ್ಷೆಗಳು ತಿಳಿಸಿವೆ.
|