ಪ್ರಮುಖ ಜಾಗತಿಕ ಆಟೋ ನಿರ್ಮಾಣ ಸಂಸ್ಥೆಯಾಗಿರುವ ಟೊಯೋಟಾ ಮೋಟಾರ್ ಕಾರ್ಪ್ಸ್ ತನ್ನ ಹೈಬ್ರಿಡ್ ಪ್ರಿಯೂಸ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಯೋಜನೆ ನಡೆಸಿದೆ.
ಪ್ರಿಯೂಸ್‍ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಕಂಪನಿಯು ನಿರ್ಧರಿಸಿದ್ದು, ಆದರೆ ಈವರೆಗೆ ಯಾವುದೇ ಸಮಯವನ್ನು ನಿಗದಿಪಡಿಸಿಲ್ಲ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಲಿ.ನ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ತಿಳಿಸಿದ್ದಾರೆ.
2008ರ ಆವೃತ್ತಿಯ ಪ್ರಿಯೂಸ್ ಇಂಧನ ದಕ್ಷತೆಯ ಮಧ್ಯಮ ಗಾತ್ರದ ಕಾರಾಗಿದ್ದು, ಸುಮಾರು 40 ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ, ಇದು ಕನಿಷ್ಟ ಇಂಗಾಲದ ಡೈ ಆಕ್ಸೈಡ್ ಹೊರಸೂಸುವ ವಾಹನ ಎಂದು ಹೆಸರುವಾಸಿಯಾಗಿದೆ.
ಪ್ರಿಯೂಸ್ ವಿಭಿನ್ನ ಕಾರು ಎಂದು ಬಣ್ಣಿಸಿರುವ ಕಿರ್ಲೋಸ್ಕರ್, ಆದರೆ, ಇದು ದುಬಾರಿಯೂ ಆಗಿದೆ ಎಂದು ಹೇಳಿದ್ದಾರೆ.
ಹೆಚ್ಚು ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚವು ಇದರ ಸಾಧಕವಾಗಿದ್ದು, ವಿದ್ಯುತ್ ಮತ್ತು ಇಂಧನ ಎರಡರಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪ್ರಿಯೂಸ್ ಹೊಂದಿರುವುದರಿಂದ ಭಾರತೀಯ ಮಾರುಕಟ್ಟೆಯು ಇದನ್ನು ಸ್ವೀಕರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
|