ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ Search similar articles
ಹೆಚ್ಚುತ್ತಿರುವ ತೈಲ ಬೆಲೆಯು ವೈಮಾನಿಕ ಉದ್ಯಮವನ್ನು ನಷ್ಟದತ್ತ ಕೊಂಡೊಯ್ಯುವುದರ ಜೊತೆಗೆ, ಪ್ರಸಕ್ತ ವರ್ಷದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡಾ ಇಳಿಕೆ ಉಂಟಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಪ್ರಸಕ್ತ ವರ್ಷದಲ್ಲಿ ವಿಮಾನಯಾನ ಉದ್ಯಮವು ಸುಮಾರು 6.1 ಶತಕೋಟಿ ಡಾಲರ್‌ಗಳಷ್ಟು ನಷ್ಟವನ್ನು ಅನುಭವಿಸಿದ್ದು, ಇದು ಕಳೆದ ವರ್ಷದ 5.6 ಶತಕೋಟಿ ಡಾಲರ್‌ಗಿಂತ ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ(ಐಎಟಿಎ)ಯು ಹೇಳಿದೆ.

ಇದಲ್ಲದೆ, ಸರಕು ಸಾಗಾಣಿಕೆ ಪ್ರಮಾಣವು ಶೇ.0.8ರಷ್ಟು ಇಳಿಕೆಗೊಂಡಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.3.8ರಷ್ಟು ಕುಸಿತ ಉಂಟಾಗಿದೆ ಎಂದು ಐಎಟಿಎ ವರದಿಗಳು ಹೇಳಿವೆ.

ಇಲ್ಲಿವರೆಗಿನ ಉದ್ಯಮದ ಅಭಿವೃದ್ಧಿಯಲ್ಲಿ ಇದು ಅತ್ಯಂತ ಕುಂಠಿತ ಅಭಿವೃದ್ಧಿಯಾಗಿದ್ದು, ವ್ಯವಹಾರ ವಿಶ್ವಾಸವು ಕುಸಿಯುತ್ತಿದೆ. ಮತ್ತು ಗಗನಕ್ಕೇರುತ್ತಿರುವ ತೈಲ ಬೆಲೆಯು ಇದನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಐಎಟಿಎ ಪ್ರಧಾನ ನಿರ್ದೇಶಕ ಮತ್ತು ಸಿಇಒ ಗಿಯೋವನಿ ಬಿಸಿಗ್ನಾನಿ ತಿಳಿಸಿದ್ದಾರೆ.
ಮತ್ತಷ್ಟು
ಭಾರತೀಯ ಮಾರುಕಟ್ಟೆಗೆ ಟೊಯೋಟಾ ಪ್ರಿಯೂಸ್
ಜಾಗತಿಕ ತೈಲ ಬೆಲೆಯಲ್ಲಿ ಇಳಿಕೆ
ಭಾರತದ ಮೇಲೆ ಅಮೆರಿಕ ಆರ್ಥಿಕತೆ ಪರಿಣಾಮ: ರತನ್
ಗ್ರಾಮೀಣ ವ್ಯವಹಾರ ಕೇಂದ್ರಗಳಿಗೆ ಚಿಂತನೆ
ಹಣದುಬ್ಬರ ಶೇ.8ಕ್ಕೆ ಇಳಿಯಲಿದೆ: ರಂಗರಾಜನ್
ಅಕ್ಕಿ ರಫ್ತು ನಿಷೇಧ ಹಿಂತೆಗೆತಕ್ಕೆ ಸರಕಾರ ಚಿಂತನೆ