ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರಿ ವ್ಯಾಪಾರಿಗಳಿಂದ ಜಮ್ಮು ಉತ್ಪನ್ನಗಳ ಬಹಿಷ್ಕಾರ
ಅಮರನಾಥ ಸಂಘರ್ಷ ಸಮಿತಿಯು ಹೇರಿರುವ ಆರ್ಥಿಕ ನಿರ್ಬಂಧದ ಹಿನ್ನೆಲೆಯಲ್ಲಿ, ಕಾಶ್ಮೀರ ವ್ಯಾಪಾರಿ ಒಕ್ಕೂಟವು ಜಮ್ಮು ಪ್ರದೇಶದ ಎಲ್ಲಾ ವ್ಯಾಪಾರಿಗಳೊಂದಿಗಿನ ಸಂಬಂಧವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದು, ಇತರ ನಗರಗಳಾದ ಅಮೃತಸರ ಮತ್ತು ದೆಹಲಿಯಿಂದ ಉತ್ಪನ್ನಗಳನ್ನು ಖರೀದಿಸಲಿದೆ ಎಂದು ಹೇಳಿದೆ.

ಜಮ್ಮು ವ್ಯಾಪಾರಿಗಳಿಂದ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ನಿರ್ಧರಿಸಿದ್ದು, ಇದರ ಬದಲಾಗಿ ಇತರ ಮಾರುಕಟ್ಟೆಗಳಾದ ಅಮೃತಸರ ಮತ್ತು ದೆಹಲಿಯಿಂದ ಉತ್ಪನ್ನಗಳನ್ನು ಖರೀದಿಸಲಾಗುವುದು ಎಂದು ವ್ಯಾಪಾರಿ ಒಕ್ಕೂಟದ ಮುಖ್ಯಸ್ಥ ಜಾನ್ ಮಹಮ್ಮದ್ ಕೌಲ್ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

"ಇನ್ನೆಂದಿಗೂ ಜಮ್ಮುವಿನ ವ್ಯಾಪಾರಿಗಳೊಂದಿಗೆ ಸಹಕರಿಸುವುದಿಲ್ಲ. ಅಲ್ಲದೆ, ಅವರಿಂದ ಯಾವುದೇ ಉತ್ಪನ್ನಗಳನ್ನೂ ಖರೀದಿಸುವುದಿಲ್ಲ. ಜಮ್ಮು ವ್ಯಾಪಾರಿಗಳನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ" ಎಂದು ಕೌಲ್ ಹೇಳಿದ್ದು, ಕಾಶ್ಮೀರ ವ್ಯಾಪಾರಿಗಳಿಗೆ ಭದ್ರತೆ ನೀಡಲು ಕೇಂದ್ರವು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಕಣಿವೆಯಲ್ಲಿನ ಆರ್ಥಿಕ ದಿಗ್ಬಂಧನ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೇಲಿನ ದಾಳಿ ಒಂದು ಪೂರ್ವಯೋಜಿತ ಪಿತೂರಿಯಾಗಿದ್ದು, ಇದರಲ್ಲಿ ಕೇಂದ್ರವು ಭಾಗಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಕೌಲ್ ತಿಳಿಸಿದ್ದಾರೆ.
ಮತ್ತಷ್ಟು
ಫೋರ್ಡ್ ಇಂಡಿಯಾದಿಂದ 4 ನಗರಗಳಲ್ಲಿ ಆರ್ಎಸ್ಎ ಸೇವೆ
ಆಗಸ್ಟ್ 21ರಂದು ಭಾರತಕ್ಕೆ ಆಪಲ್ ಐಫೋನ್
ನವರಾತ್ರಿಯ ವೇಳೆ ನ್ಯಾನೋ ಮಾರುಕಟ್ಟೆಯಲ್ಲಿ
ಆನ್‌ಲೈನ್ ಕಿರುಸಾಲ ನೀಡುವ 'ರಂಗ್‌ದೇ'
ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ
ಭಾರತೀಯ ಮಾರುಕಟ್ಟೆಗೆ ಟೊಯೋಟಾ ಪ್ರಿಯೂಸ್