ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಪಲ್‌‌ಗೆ ಸ್ಪರ್ಧೆ: ನೋಕಿಯಾದಿಂದ ಮತ್ತಷ್ಟು ಮೊಬೈಲ್
ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿರುವ ಆಪಲ್ ಐಫೋನ್‌ನ ಸ್ಪರ್ಧೆಯನ್ನು ಎದುರಿಸಿ, ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮುಂಚೂಣಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಪ್ರಮುಖ ಮೊಬೈಲ್ ನಿರ್ಮಾಣ ಸಂಸ್ಥೆ ನೋಕಿಯಾ ಮುಂದಿನ ಆರು ತಿಂಗಳುಗಳಲ್ಲಿ ವಿವಿಧ ವಿನ್ಯಾಸದ ಮತ್ತು ತಂತ್ರಜ್ಞಾನದ ಮೊಬೈಲ್‌ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಆಪಲ್ ಐಫೋನ್‌ನೊಂದಿಗಿನ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ, ನೂತನ ಮೊಬೈಲ್ ಗೇಮ್ಸ್, ಆನ್‌ಲೈನ್ ಮ್ಯೂಸಿಕ್ ಸ್ಟೋರ್ಸ್ ಮತ್ತು ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಮೊಬೈಲ್‌ಗಳನ್ನು ಕಂಪನಿಯು ಬಿಡುಗಡೆಗೊಳಿಸಲಿದೆ ಎಂದು ನೋಕಿಯಾ ತಿಳಿಸಿದೆ.

ಇತ್ತೀಚೆಗೆ, ನೋಕಿಯಾವು ತನ್ನ ಪ್ರಥಮ ಜಿಪಿಎಸ್ ನಿಯಂತ್ರಿತ ನೋಕಿಯಾ 6210 ನ್ಯಾವಿಗೇಟರ್ ಫೋನನ್ನು ಬಿಡುಗಡೆಗೊಳಿಸಿತ್ತು.

ಎಂಪಿ3 ಪ್ಲೇಯರ್, ಎಫ್ಎಂ ರೇಡಿಯೋ, 3.2 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿರುವ ಈ ನೂತನ ನೋಕಿಯಾ ಮೊಬೈಲ್‌ನ ಬೆಲೆಯು 18,000 ರೂಪಾಯಿಗಳಾಗಿವೆ.

ನ್ಯಾವಿಗೇಶನ್ ಲಕ್ಷಣಗಳನ್ನು ಹೊಂದಿದ ಹತ್ತು ನೋಕಿಯಾ ಮೊಬೈಲ್‌ಗಳು ಪ್ರಸಕ್ತ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮತ್ತಷ್ಟು
ಕಾಶ್ಮೀರಿ ವ್ಯಾಪಾರಿಗಳಿಂದ ಜಮ್ಮು ಉತ್ಪನ್ನಗಳ ಬಹಿಷ್ಕಾರ
ಫೋರ್ಡ್ ಇಂಡಿಯಾದಿಂದ 4 ನಗರಗಳಲ್ಲಿ ಆರ್ಎಸ್ಎ ಸೇವೆ
ಆಗಸ್ಟ್ 21ರಂದು ಭಾರತಕ್ಕೆ ಆಪಲ್ ಐಫೋನ್
ನವರಾತ್ರಿಯ ವೇಳೆ ನ್ಯಾನೋ ಮಾರುಕಟ್ಟೆಯಲ್ಲಿ
ಆನ್‌ಲೈನ್ ಕಿರುಸಾಲ ನೀಡುವ 'ರಂಗ್‌ದೇ'
ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ