ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ: ಚಿದಂಬರಂ
ಹಣದುಬ್ಬರವು ಸದ್ಯದಲ್ಲಿಯೇ ನಿಯಂತ್ರಣಕ್ಕೆ ಬರಲಿದ್ದು, ಇದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಕಾಂಗ್ರೆಸ್ ಪಕ್ಷಕ್ಕೆ ಭರವಸೆ ನೀಡಿದ್ದು, ಜಾಗತಿಕ ಕಚ್ಚಾತೈಲ ಬೆಲೆ ಕೂಡಾ ಇಳಿಕೆಯ ಸೂಚನೆಯನ್ನು ನೀಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಲೆ ಏರಿಕೆಯು ಸದ್ಯದಲ್ಲಿಯೇ ನಿಯಂತ್ರಣಕ್ಕೆ ಬರಲಿದೆ ಎಂದು ಚಿದಂಬರಂ ಪಕ್ಷಕ್ಕೆ ಭರವಸೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯು ದೇಶದ ಬೆಲೆ ಚಂಚಲತೆಗೆ ಕಾರಣ ಎಂದು ಹೇಳಿರುವುದಾಗಿ ಕಾಂಗ್ರೆಸ್‌ನ ಹಿರಿಯ ನಾಯಕರು ತಿಳಿಸಿದ್ದಾರೆ.

ಜಾಗತಿಕ ತೈಲ ಬೆಲೆಯ ಇಳಿಮುಖ ಪ್ರವೃತ್ತಿ ಮುಂದುವರಿದಲ್ಲಿ, ಹಣದುಬ್ಬರವು ಮುಂದಿನ ಕೆಲವು ತಿಂಗಳುಗಳಲ್ಲೇ ಶೇ.ಐದರಿಂದ ಆರಕ್ಕೆ ಇಳಿಯಲಿದೆ ಎಂದು ಚಿದಂಬರಂ ತಿಳಿಸಿರುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಬೆಲೆಗಳನ್ನು ಶೀಘ್ರವೇ ನಿಯಂತ್ರಣಕ್ಕೆ ತರಲಾಗುವುದು ಎಂಬುದಾಗಿ ಚಿದಂಬರಂ ಭರವಸೆ ನೀಡಿದ್ದಾರಾದರೂ, ಅವರು ಯಾವುದೇ ಸಮಯದ ಚೌಕಟ್ಟನ್ನು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಜುಲೈ ತಿಂಗಳಲ್ಲಿ ತೈಲ ಬೆಲೆಯು ಬ್ಯಾರಲೊಂದರ 147 ಡಾಲರ್‌ಗೆ ತಲುಪಿದ್ದು ಜಾಗತಿಕ ಕಚ್ಚಾತೈಲ ಬೆಲೆಯು, ಬುಧವಾರ ಬ್ಯಾರಲ್‌ಗೆ 118 ಡಾಲರ್‌ಗೆ ಇಳಿದಿತ್ತು.

ಈ ನಡುವೆ, ಹೆಚ್ಚುತ್ತಿರುವ ಬಡ್ಡಿದರವು ಮಧ್ಯಮವರ್ಗದ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾಂಗ್ರೆಸ್‌ನ ಆತಂಕಕ್ಕೆ ಪ್ರತಿಯಾಗಿ, ಮುಂದಿನ ಒಂದು ವರ್ಷದೊಳಗೆ ಬಡ್ಡಿದರವು ಇಳಿಕೆಗೊಳ್ಳಲಿದೆ ಎಂದು ಚಿದಂಬರಂ ಭರವಸೆ ನೀಡಿದ್ದಾರೆ.
ಮತ್ತಷ್ಟು
ಆಪಲ್‌‌ಗೆ ಸ್ಪರ್ಧೆ: ನೋಕಿಯಾದಿಂದ ಮತ್ತಷ್ಟು ಮೊಬೈಲ್
ಕಾಶ್ಮೀರಿ ವ್ಯಾಪಾರಿಗಳಿಂದ ಜಮ್ಮು ಉತ್ಪನ್ನಗಳ ಬಹಿಷ್ಕಾರ
ಫೋರ್ಡ್ ಇಂಡಿಯಾದಿಂದ 4 ನಗರಗಳಲ್ಲಿ ಆರ್ಎಸ್ಎ ಸೇವೆ
ಆಗಸ್ಟ್ 21ರಂದು ಭಾರತಕ್ಕೆ ಆಪಲ್ ಐಫೋನ್
ನವರಾತ್ರಿಯ ವೇಳೆ ನ್ಯಾನೋ ಮಾರುಕಟ್ಟೆಯಲ್ಲಿ
ಆನ್‌ಲೈನ್ ಕಿರುಸಾಲ ನೀಡುವ 'ರಂಗ್‌ದೇ'