ಜಾಗತಿಕ ತಂಬಾಕು ಕೊರತೆಯಿಂದಾಗಿ, ಭಾರತೀಯ ತಂಬಾಕಿಗೆ ಬೇಡಿಕೆ ಹೆಚ್ಚಿದ್ದು, 2008-09ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯ ರಫ್ತಿನಲ್ಲಿ ಶೇ.55ರಷ್ಟು ಹೆಚ್ಚಳ ಉಂಟಾಗಿದೆ. ಈ ಅವಧಿಯಲ್ಲಿ 169 ದಶಲಕ್ಷ ಡಾಲರ್ ತಂಬಾಕು ರಫ್ತು ಮಾಡಲಾಗಿದೆ.
ಜಾಗತಿಕವಾಗಿ ತಂಬಾಕು ಉತ್ಪಾದನೆಯಲ್ಲಿ ಇಳಿಮುಖ ಉಂಟಾಗುತ್ತಿದ್ದು, ಬ್ರೆಜಿಲ್ ಮತ್ತು ಜಿಂಬಾಬ್ವೆಯಲ್ಲೂ ಉತ್ಪಾದನೆ ಮಂದವಾಗಿದೆ ಎಂದು ತಂಬಾಕು ಮಂಡಳಿಯ ಮುಖ್ಯಸ್ಥ ಜೆ.ಸುರೇಶ್ ಬಾಬು ತಿಳಿಸಿದ್ದಾರೆ.
ದೊಡ್ಡ ತಂಬಾಕು ಕಂಪೆನಿಗಳು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಖರೀದಿಸಿದ್ದು, 2008-09ರ ಅಂತ್ಯದ ವೇಳೆ ರಫ್ತು ಪ್ರಮಾಣವು 600 ದಶಲಕ್ಷ ಡಾಲರ್‌ಗೆ ತಲುಪಲಿದ್ದು, ಕಳೆದ ವರ್ಷದ 500 ದಶಲಕ್ಷ ಡಾಲರ್‌ಗಿಂತ ಶೇ.19ರಷ್ಟು ಹೆಚ್ಚಳವಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತವು ಏಪ್ರಿಲ್-ಜೂನ್ ತಿಂಗಳಲ್ಲಿ 169 ದಶಲಕ್ಷ ಡಾಲರ್ ತಂಬಾಕು ರಫ್ತು ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 109 ದಶಲಕ್ಷ ಡಾಲರ್ ತಂಬಾಕು ರಫ್ತು ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
|