ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಸ್ಎನ್ಎಲ್‌ನಿಂದ 3ಜಿ ಸೇವೆಗೆ ಸಿದ್ಧತೆ
ಸ್ವೀಡನ್‌ನ ಎರಿಕ್ಸನ್ ತಂತ್ರಜ್ಞಾನದ ಮೂಲಕ, ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ ಲಿಮಿಟೆಡ್ ಮುಂದಿನ ವರ್ಷದ ಜೂನ್ ತಿಂಗಳಲ್ಲಿ 3ಜಿ ಮೊಬೈಲ್ ಸೇವೆಯನ್ನು ಪ್ರಾರಂಭಿಸಲಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

ಎರಿಕ್ಸನ್‌ನಿಂದ ಡಿಸೆಂಬರ್ ತಿಂಗಳೊಳಗೆ ಸಾಧನಗಳನ್ನು ಸ್ವೀಕರಿಸುವ ನಿರೀಕ್ಷೆಯಿದ್ದು, ಸೇವೆಯನ್ನು ಪ್ರಾರಂಭಿಸಲು ಆರು ತಿಂಗಳು ಸಮಯ ಬೇಕಾಗಬಹುದು. ಪ್ರಾಥಮಿಕವಾಗಿ ಹತ್ತು ದಶಲಕ್ಷ ಲೈನ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ 1.75 ಶತಕೋಟಿ ಡಾಲರ್ ವೆಚ್ಚದಲ್ಲಿ 45 ದಶಲಕ್ಷ ಲೈನ್‌ಗಳಿಗೆ ಟೆಂಡರ್ ಕರೆಯಲಾಗಿದ್ದು, ಈ ಟೆಂಡರ್‌ನಲ್ಲಿ ಶೇ.60ರಷ್ಟು ಪಾಲನ್ನು ಎರಿಕ್ಸನ್‌ಗೆ ನೀಡಲಾಗಿತ್ತು. ಇದರಲ್ಲಿ ಹತ್ತು ದಶಲಕ್ಷವನ್ನು 3ಜಿ ಸೇವೆಗಾಗಿ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

3ಜಿ ಸೇವೆಯು ತ್ವರಿತ ಸಂಪರ್ಕವನ್ನು ಒದಗಿಸುವುದರ ಜೊತೆಗೆ, ಉನ್ನತ ವೇಗದ ನೆಟ್ ಸಂಪರ್ಕ, ವೀಡಿಯೋ ಕರೆ, ಸಂಗೀತ, ವೀಡಿಯೋ ಡೌನ್‌ಲೋಡ್, ಆಕರ್ಷಕ ಗೇಮಿಂಗ್ ಮುಂತಾದ ವಿಸ್ತೃತ ಎಪ್ಲಿಕೇಶನ್‌ಗಳನ್ನೂ ಒಳಗೊಂಡಿದೆ.

ಈ ತಿಂಗಳ ಅಂತ್ಯದಲ್ಲಿ ಒಂಭತ್ತು ಶತಕೋಟಿ ಡಾಲರ್ ವೆಚ್ಚದಲ್ಲಿ 90 ದಶಲಕ್ಷ ಲೈನ್‌ಗಳ ಮೆಗಾ ಟೆಂಡರ್ ಕರೆಯುವ ಪ್ರಸ್ತಾಪವನ್ನು ಬಿಎಸ್ಎನ್ಎಲ್ ಹೊಂದಿದ್ದು, ಇದರಲ್ಲಿ ಶೇ.50ರಷ್ಟನ್ನು 3ಜಿ ಟೆಲಿಫೋನ್‌ಗೆ ನೀಡಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ತಂಬಾಕು ರಫ್ತು ಶೇ.55ರಷ್ಟು ಹೆಚ್ಚಳ
ಏರ್‌ಟೆಲ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರಾಂದೋಲನ
ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ: ಚಿದಂಬರಂ
ಆಪಲ್‌‌ಗೆ ಸ್ಪರ್ಧೆ: ನೋಕಿಯಾದಿಂದ ಮತ್ತಷ್ಟು ಮೊಬೈಲ್
ಕಾಶ್ಮೀರಿ ವ್ಯಾಪಾರಿಗಳಿಂದ ಜಮ್ಮು ಉತ್ಪನ್ನಗಳ ಬಹಿಷ್ಕಾರ
ಫೋರ್ಡ್ ಇಂಡಿಯಾದಿಂದ 4 ನಗರಗಳಲ್ಲಿ ಆರ್ಎಸ್ಎ ಸೇವೆ