ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಗಸ್ಟ್‌ನಲ್ಲಿ ಸ್ಟೀಲ್ ಬೆಲೆಯಲ್ಲಿ ಹೆಚ್ಚಳವಿಲ್ಲ
ಆದಾನ ವೆಚ್ಚದಲ್ಲಿ ಏರಿಕೆಯಾಗಿದ್ದರೂ, ಆಗಸ್ಟ್ ತಿಂಗಳಲ್ಲಿ ಸ್ಟೀಲ್ ಬೆಲೆಯನ್ನು ಹೆಚ್ಚಿಸುವುದಿಲ್ಲ ಎಂದು ಪ್ರಮುಖ ಇಂಡಿಯನ್ ಸ್ಟೀಲ್ ಉತ್ಪಾದಕರು ಸ್ಪಷ್ಟಪಡಿಸಿದ್ದಾರೆ. ಆದರೆ, ಸೆಪ್ಟೆಂಬರ್ ತಿಂಗಳಲ್ಲಿ ಈ ನಿರ್ಧಾರವನ್ನು ಪುನರ್ ವಿಮರ್ಷಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕವಾಗಿ ಕಬ್ಬಿಣದ ಅದಿರಿನ ಬೆಲೆಯು ದ್ವಿಗುಣಗೊಂಡ ಹಿನ್ನೆಲೆಯಲ್ಲಿ ಮತ್ತು ಕಲ್ಲಿದ್ದಲು ಬೆಲೆಯಲ್ಲಿನ ಹೆಚ್ಚಳದಿಂದಾಗಿ, 2008ರಲ್ಲಿ ಸ್ಟೀಲ್ ಉತ್ಪಾದನಾ ವೆಚ್ಚವು ಶೇ.60ಕ್ಕಿಂತಲೂ ಹೆಚ್ಚಾಗಿತ್ತು. ಇದು, ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಇದರ ಹೊರತಾಗಿಯೂ, ಸರಕಾರಕ್ಕೆ ಹಣದುಬ್ಬರವನ್ನು ನಿಯಂತ್ರಿಸಲು ಸಹಕಾರವಾಗುವ ನಿಟ್ಟಿನಲ್ಲಿ, ಪ್ರಮುಖ ಸ್ಟೀಲ್ ಉತ್ಪಾದನಾ ಸಂಸ್ಥೆಗಳಾದ ಟಾಟಾ ಸ್ಟೀಲ್, ಸರಕಾರಿ ಸ್ವಾಮ್ಯದ ಭಾರತೀಯ ಸ್ಟೀಲ್ ಪ್ರಾಧಿಕಾರ, ಜೆಎಸ್‌ಡಬ್ಲ್ಯೂ ಲಿ. ಮತ್ತು ಇಸ್ಪಾತ್ ಇಂಡಸ್ಟ್ರೀಸ್ ಆಗಸ್ಟ್ ತಿಂಗಳಲ್ಲಿ ಬೆಲೆ ಏರಿಸುವುದಿಲ್ಲ ಎಂದು ತಿಳಿಸಿದೆ.

ಇದು ಸ್ವಯಂಪ್ರೇರಿತ ನಿರ್ಧಾರವಾಗಿದೆ. ಆದರೆ, ಮುಂದಿನ ತಿಂಗಳು ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇದೆ ಎಂದು ಜೆಎಸ್‌ಡಬ್ಲ್ಯೂ ಸ್ಟೀಲ್ ಉತ್ಪಾದನಾ ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕ ಎಂ.ವಿ.ಎಸ್.ಶೇಷಗಿರಿ ರಾವ್ ತಿಳಿಸಿದ್ದಾರೆ.
ಮತ್ತಷ್ಟು
ಬಿಎಸ್ಎನ್ಎಲ್‌ನಿಂದ 3ಜಿ ಸೇವೆಗೆ ಸಿದ್ಧತೆ
ತಂಬಾಕು ರಫ್ತು ಶೇ.55ರಷ್ಟು ಹೆಚ್ಚಳ
ಏರ್‌ಟೆಲ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರಾಂದೋಲನ
ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ: ಚಿದಂಬರಂ
ಆಪಲ್‌‌ಗೆ ಸ್ಪರ್ಧೆ: ನೋಕಿಯಾದಿಂದ ಮತ್ತಷ್ಟು ಮೊಬೈಲ್
ಕಾಶ್ಮೀರಿ ವ್ಯಾಪಾರಿಗಳಿಂದ ಜಮ್ಮು ಉತ್ಪನ್ನಗಳ ಬಹಿಷ್ಕಾರ