ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈನಲ್ಲಿ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ
ನಗರದ ವಾಣಿಜ್ಯ ಕೇಂದ್ರದಲ್ಲಿ ಗುರುವಾರ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅಭಿಯಾನವು ಇನ್ನೂ ಮೂರು ದಿನ ಮುಂದುವರಿಯಲಿದ್ದು, ಇಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ವಚ್ಚತಾ ವಸ್ತುಗಳನ್ನು ಉತ್ಪಾದಿಸುವ ಸುಮಾರು 40 ಕಂಪೆನಿಗಳು ತಮ್ಮ ಮಳಿಗೆಗಳನ್ನು ತೆರೆದಿವೆ.

ಚೆನ್ನೈಯ ಮೇಯರ್ ಸಿ. ಸುಬ್ರಹ್ಮಣ್ಯನ್ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಕೊಲೊಂಬಿಯಾದ ರಾಯಭಾರಿ ಜೂವನ್ ಅಲ್‌ಫ್ರೆಡೊ ಪಿಂಟೊ ಸಾವೇದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣ, ಮಲ್ಟಿಪ್ಲೆಕ್ಸ್, ವಿಮಾನ ನಿಲ್ದಾಣಗಳನ್ನು ಸ್ವಚ್ಚಗೊಳಿಸುವುದರ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಹೊಸ ಹೊಸ ಸ್ಪಚ್ಚತಾ ಸಾಮಗ್ರಿಗಳು, ರಾಸಯನಿಕಗಳನ್ನು ಪ್ರದರ್ಶನಗೊಳಿಸಲಾಗುವುದು.

ಭಾರತದಲ್ಲಿ ಸ್ವಚ್ಚತಾ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಯೂ ವಾರ್ಷಿಕವಾಗಿ 30 ರಿಂದ 50 ಶೇಕಡಾದಷ್ಟು ಪ್ರಗತಿ ಸಾಧಿಸುತ್ತಿದ್ದು ಅನೇಕ ವಿದೇಶಿ ಕಂಪೆನಿಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸಲು ತುದಿಗಾಲ ಮೇಲೆ ನಿಂತಿದೆ.

ವೀಕ್ಷಕರಿಗೆ ಮಾರ್ಗ ಗುಡಿಸುವ ಅಧುನಿಕ ಸಾಧನ, ಸ್ಕ್ರಬ್ಬರ್ ಡ್ರೈಯರ್ಸ್, ತ್ಯಾಜ್ಯ ನಿರ್ವಹಣೆ ಬಿನ್‌ಗಳನ್ನು ನೋಡುವ ಅವಕಾಶವಿದ್ದು ಕೊನೆಯ ದಿನ ಆಹಾರ ಸುರಕ್ಷತೆ ಮತ್ತು ಆರೋಗ್ಯ ರಂಗದಲ್ಲಿ ಸ್ವಚ್ಚತೆಯೆಂಬ ವಿಷಯಗಳ ಬಗ್ಗೆ ವಿಚಾರಗೋಷ್ಠಿಯನ್ನೂ ಹಮ್ಮಿಕೊಳ್ಳಲಾಗಿದೆ.

ಸ್ವಚ್ಚ ಭಾರತ ಅಭಿಯಾನವನ್ನು ಕ್ಲೀನ್ ಇಂಡಿಯಾ ಜರ್ನಲ್ ಎಂಬ ಸ್ವಚ್ಚತೆಯ ಬಗೆಗಿನ ಮಾಸಿಕ ಪತ್ರಿಕೆ ಪ್ರತಿ ವರ್ಷ ಸಂಘಟಿಸುತ್ತಿದೆ. ಇದು ಮೊದಲ ಬಾರಿ 2005ರಲ್ಲಿ ಮುಂಬೈ ಅನಂತರ ಅನುಕ್ರಮವಾಗಿ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಆಯೋಜಿಸಲ್ಪಟ್ಟಿತ್ತು.
ಮತ್ತಷ್ಟು
ಆಗಸ್ಟ್‌ನಲ್ಲಿ ಸ್ಟೀಲ್ ಬೆಲೆಯಲ್ಲಿ ಹೆಚ್ಚಳವಿಲ್ಲ
ಬಿಎಸ್ಎನ್ಎಲ್‌ನಿಂದ 3ಜಿ ಸೇವೆಗೆ ಸಿದ್ಧತೆ
ತಂಬಾಕು ರಫ್ತು ಶೇ.55ರಷ್ಟು ಹೆಚ್ಚಳ
ಏರ್‌ಟೆಲ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರಾಂದೋಲನ
ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ: ಚಿದಂಬರಂ
ಆಪಲ್‌‌ಗೆ ಸ್ಪರ್ಧೆ: ನೋಕಿಯಾದಿಂದ ಮತ್ತಷ್ಟು ಮೊಬೈಲ್