ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.12.1ಕ್ಕೇರಿಕೆ : 13 ವರ್ಷಗಳಲ್ಲೇ ಗರಿಷ್ಠ
ನವದೆಹಲಿ: ಕಳೆದ ಹದಿಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟ ದಾಟಿರುವ ಹಣದುಬ್ಬರದ ಪ್ರಮಾಣವು ಶೇ.12.1ಕ್ಕೇರಿದೆ. ಆಹಾರ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರಕ್ಕೆ ಕೊಡುಗೆ ನೀಡಿದ್ದು, ಜುಲೈ 26ಕ್ಕೆ ಅಂತ್ಯಗೊಂಡಿರುವ ವಾರದಲ್ಲಿ ಹಣದುಬ್ಬರವು ಏರುಮುಖದಲ್ಲೇ ಸಾಗಿದ್ದು, ಇದಕ್ಕಾಗಿ ಕೈಗೊಂಡಿರುವ ಕ್ರಮಗಳು ಯಾವುದೇ ಪರಿಣಾಮ ಬೀರಿಲ್ಲ.

ಕೆಲವು ಆಹಾರ ವಸ್ತುಗಳು ಮತ್ತು ಉತ್ಪಾದನಾ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರವನ್ನು ಶೇ. 11.98ರ ಪ್ರಮಾಣದಿಂದ 12.1ಕ್ಕೇರಿಸಿದೆ. ಈ ಏರಿಕೆಯಿಂದಾಗಿ ಕೇಂದ್ರೀಯ ಬ್ಯಾಂಕಿನ ಕಿರು ಅವಧಿಯ ಸಾಲದರದಲ್ಲಿ ಇನ್ನೂ 25 ಬೇಸಿಸ್ ಅಂಕಗಳ ಏರಿಕೆಯಾಗಬಹುದೆಂಬುದಾಗಿ ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ.

ಸರಕಾರ ಹಾಗೂ ಆರ್‌ಬಿಐ ಹಣದುಬ್ಬರ ನಿಯಂತ್ರಣಕ್ಕೆ ಯುದ್ಧೋಪಾದಿಯಲ್ಲಿ ಆಡಳಿತಾತ್ಮತ ಹಾಗೂ ಹಣಕಾಸು ಕ್ರಮಗಳನ್ನು ಕೈಗೊಂಡಿದ್ದರೂ ಹಣದುಬ್ಬರ ಮಾತ್ರ ನಿಯಂತ್ರಣಕ್ಕೊಳಗಾಗಿಲ್ಲ.

ವಿತ್ತ ಸಚಿವ ಪಿ.ಚಿದಂಬರಂ ಹಣದುಬ್ಬರ ನಿಯಂತ್ರಣವಾಗಲಿದೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರದಲ್ಲಿ ಮಾತ್ರ ಇಳಿಕೆಯಾಗಿಲ್ಲ.
ಮತ್ತಷ್ಟು
ಚೆನ್ನೈನಲ್ಲಿ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ
ಆಗಸ್ಟ್‌ನಲ್ಲಿ ಸ್ಟೀಲ್ ಬೆಲೆಯಲ್ಲಿ ಹೆಚ್ಚಳವಿಲ್ಲ
ಬಿಎಸ್ಎನ್ಎಲ್‌ನಿಂದ 3ಜಿ ಸೇವೆಗೆ ಸಿದ್ಧತೆ
ತಂಬಾಕು ರಫ್ತು ಶೇ.55ರಷ್ಟು ಹೆಚ್ಚಳ
ಏರ್‌ಟೆಲ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರಾಂದೋಲನ
ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ: ಚಿದಂಬರಂ