ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವದಲ್ಲಿ ತೈಲ ಬಿಕ್ಕಟ್ಟು ಉಂಟಾಗಲಿದೆ: ವರದಿ
ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ವಿಶ್ವವು ಬ್ರಹತ್ ತೈಲ ಕೊರತೆಯನ್ನು ಎದುರಿಸಲಿದ್ದು, ಇದರಿಂದಾಗಿ ತೈಲ ಬೆಲೆಯು ಬ್ಯಾರಲೊಂದರ 200 ಡಾಲರ್‌ಗೆ ಏರಲಿದೆ ಎಂದು ವರದಿಗಳು ತಿಳಿಸಿವೆ.

ತೈಲ ಉತ್ಪಾದನೆಯ ಸಾಮರ್ಥ್ಯವನ್ನು ತೈಲ ನಿರ್ಮಾಣ ರಾಷ್ಟ್ರಗಳು ಹೆಚ್ಚಿಸಿದರೂ, 2013ರಲ್ಲಿ ತೈಲ ಬಿಕ್ಕಟ್ಟು ಉಂಟಾಗಲಿದೆ ಎಂದು ಚಾತಂ ಹೌಸ್ ವರದಿಗಳು ತಿಳಿಸಿವೆ.

ಭವಿಷ್ಯಕ್ಕಾಗಿ ಸಂಗ್ರಹಿಸಿದ ತೈಲವನ್ನು ಬಳಸಿಕೊಂಡರೂ, ತೈಲ ಬೆಲೆಯಲ್ಲಿ ಹೆಚ್ಚಳ ಉಂಟಾಗಲಿದ್ದು, ಇದು ಬ್ಯಾರಲ್‌ಗೆ 200 ಡಾಲರ್‌ಗೆ ಏರುವ ಸಾಧ್ಯತೆ ಇದೆ ಎಂದು ಚಾತಂ ಹೌಸ್‌ನ ಹಿರಿಯ ಸಂಶೋಧಕರು ತಿಳಿಸಿದ್ದಾರೆ. ಬೆಲೆಏರಿಕೆಗೆ ಭೂಮಿಯಾಳದ ತೈಲಕೊರತೆಯು ಕಾರಣವಾಗದು, ಬದಲಿಗೆ, ತೈಲ ಕಂಪೆನಿಗಳ ಅಸಮರ್ಪಕ ಹೂಡಿಕೆ ಕಾರಣವಾಗಲಿದೆ ಎಂದು ವರದಿ ತಿಳಿಸಿದೆ.

2009ರಲ್ಲಿ ಸೌದಿ ತೈಲ ಉತ್ಪಾದನಾ ಸಾಮರ್ಥ್ಯವು ಪ್ರತಿದಿನಕ್ಕೆ 12.5 ಮಿಲಿಯನ್ ಡಾಲರ್ ತಲುಪಿದ ನಂತರ, ಸೌದಿ ತೈಲ ಉತ್ಪಾದನಾ ಸಾಮರ್ಥ್ಯವು ತಗ್ಗುವ ಸಾಧ್ಯತೆ ಎಂದು ಈ ವರದಿಗಳು ಸ್ಪಷ್ಟಪಡಿಸಿವೆ.

ಜುಲೈ ತಿಂಗಳಲ್ಲಿ ತೈಲ ಬೆಲೆಯು ಬ್ಯಾರಲ್‌ಗೆ 147 ಡಾಲರ್‌ಗೆ ತಲುಪುವುದರೊಂಗಿಗೆ ತೈಲ ಬೆಲೆಯು ಕಳೆದ ಕೆಲವು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಕೈಗಾರೀಕೃತ ರಾಷ್ಟ್ರಗಳ ಸರಕಾರವು ಇಂಧನ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಲು ಆಸಕ್ತಿ ತೋರುವುದಿಲ್ಲ ಎಂದು ಈ ವರದಿಗಳು ಸ್ಪಷ್ಟಪಡಿಸಿದ್ದು, ಮಾರುಕಟ್ಟೆ ಮಾತ್ರವೇ ಹೆಚ್ಚು ಇಂಧನ ಸ್ಥಾವರಗಳಿಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡಲು ಸಾಧ್ಯವಾಗುವುದಿಲ್ಲ. ಇದು ತೈಲ ಬೆಲೆ ಹೆಚ್ಚಳಕ್ಕೆ ಹಾದಿ ಮಾಡಿಕೊಡಲಿದೆ ಎಂದು ತಿಳಿಸಿದೆ.
ಮತ್ತಷ್ಟು
ಹಣದುಬ್ಬರ ಶೇ.12.1ಕ್ಕೇರಿಕೆ : 13 ವರ್ಷಗಳಲ್ಲೇ ಗರಿಷ್ಠ
ಚೆನ್ನೈನಲ್ಲಿ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ
ಆಗಸ್ಟ್‌ನಲ್ಲಿ ಸ್ಟೀಲ್ ಬೆಲೆಯಲ್ಲಿ ಹೆಚ್ಚಳವಿಲ್ಲ
ಬಿಎಸ್ಎನ್ಎಲ್‌ನಿಂದ 3ಜಿ ಸೇವೆಗೆ ಸಿದ್ಧತೆ
ತಂಬಾಕು ರಫ್ತು ಶೇ.55ರಷ್ಟು ಹೆಚ್ಚಳ
ಏರ್‌ಟೆಲ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರಾಂದೋಲನ