ದೇಶೀಯ ಯೂರಿಯಾ ಉತ್ಪಾದನೆಯಲ್ಲಿ ಇಳಿಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ವಿಸ್ತೃತವಾಗಿ ರೈತರಿಂದ ಬಳಸಲ್ಪಡುವ ಯೂರಿಯಾ ರಸಗೊಬ್ಬರಕ್ಕೆ ಸರಕಾರವು ನೂತನ ದರ ನೀತಿಯನ್ನು ಶುಕ್ರವಾರ ಘೋಷಿಸಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಸತ್ ಸಮಿತಿ(ಸಿಸಿಇಎ)ಯು ನೂತನ ಯೂರಿಯಾ ಹೂಡಿಕೆ ನೀತಿಗೆ ಅನುಮೋದನೆ ನೀಡಿದೆ.
ನೂತನ ನೀತಿಯಡಿಯಲ್ಲಿ, ಸಬ್ಸಿಡಿ ಮತ್ತು ಉತ್ಪಾದನಾ ವೆಚ್ಚದ ಗಣನೆಗೆ ದೇಶೀಯ ಯೂರಿಯಾ ಉತ್ಪಾದಕರಿಗೆ ಅಂತಾರಾಷ್ಟ್ರೀಯ ಸಮಾನ ದರ ಸೂತ್ರವನ್ನು ಪರಿಗಣಿಸಲಾಗುವುದು.
ಈಗಾಗಲೇ ಇರುವ ಪರಿಷ್ಕೃತ ಯೂನಿಟ್‌ಗಳ ಆಮದು ಸಮಾನ ದರದಲ್ಲಿ ಪ್ರತಿ ಟನ್‌ಗೆ 250-425 ಡಾಲರ್ ದರ ಪಟ್ಟಿಯಲ್ಲಿ ಶೇ.85ರಷ್ಟನ್ನು ಪರಿಗಣಿಸಲಾಗುವುದು.
ಎಚ್ಎಫ್‌ಸಿಎಲ್ ಮತ್ತು ಎಫ್‌ಸಿಐಎಲ್ ಯೂನಿಟ್‌ನ ಯೂರಿಯಾಗೆ ಅದೇ ದರ ಪಟ್ಟಿಯಲ್ಲಿ ಆಮದು ಸಮಾನ ದರವನ್ನು ಶೇ.95ರಷ್ಟು ಪರಿಗಣಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.
ಅಭಿಜಿತ್ ಸೇನ್ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಈ ನೂತನ ಹೂಡಿಕಾ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಸಿಬಲ್ ಹೇಳಿದ್ದಾರೆ.
|