ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಗಸ್ಟ್ 15: ರಿಲಯನ್ಸ್‌ನಿಂದ ಡಿಟಿಎಚ್‌ ಸೇವೆ
ಅನಿಲ್ ಅಂಬಾನಿ ಬಳಗದ ರಿಲಯನ್ಸ್ ಕಮ್ಯುನಿಕೇಶನ್ಸ್ ಆಗಸ್ಟ್ 15ರಂದು ರಾಷ್ಟ್ರದಾದ್ಯಂತ ಡಿಟಿಎಚ್ ಸೇವೆಯನ್ನು ಪ್ರಾರಂಭಿಸುವ ನಿರೀಕ್ಷೆ ಇದ್ದು, ಈ ಮೂಲಕ, ಡಿಟಿಎಚ್ ಮತ್ತು ಕೇಬಲ್ ವೀಕ್ಷಕರಿಗೆ ವಿಸ್ತೃತ ಆಯ್ಕೆಯು ಸದ್ಯದಲ್ಲೇ ದೊರೆಯುವ ಸಾಧ್ಯತೆಯಿದೆ.

ರಿಲಯನ್ಸ್ ಕಮ್ಯುನಿಕೇಶನ್ಸ್‌ನ ಸಹಸಂಸ್ಥೆಯಾಗಿರುವ 'ಬಿಗ್ ಡಿಜಿಟಲ್ ಟಿವಿ ಡಿಟಿಎಚ್' ಭಾರತೀಯ ಮನೆಗಳಲ್ಲಿ ಬ್ರಹತ್ ಪ್ರಮಾಣದಲ್ಲಿ ಗೃಹ ಮನರಂಜನೆಯನ್ನು ನೀಡಲಿದೆ.

ಭಾರತದಲ್ಲಿ 124 ದಶಲಕ್ಷ ಕುಟುಂಬಗಳು ಟಿವಿ ಹೊಂದಿರುವುದಾಗಿ ಅಂದಾಜಿಸಲಾಗಿದ್ದು, ಇದರಲ್ಲಿ ಸುಮಾರು 80 ದಶಲಕ್ಷ ಮಂದಿ ಕೇಬಲ್ ಟಿವಿಯನ್ನು ಅವಲಂಬಿಸಿದ್ದಾರೆ. ಭಾರತದ ಡಿಟಿಎಚ್ ನಿರ್ವಾಹಕರಾದ ಟಾಟಾ ಸ್ಕೈ, ಡಿಶ್‌ಟಿವಿ, ಸನ್ ಮುಂತಾದವುಗಳ ಬಳಕೆದಾರರ ಪ್ರಮಾಣವು ಏಳರಿಂದ ಎಂಟು ದಶಲಕ್ಷದಷ್ಟೆಂದು ಅಂದಾಜಿಸಲಾಗಿದೆ.

ಡಿಟಿಎಚ್ ಸೇವೆಯನ್ನು ಪ್ರಾರಂಭಿಸುವ ಕೆಲವು ದಿನಗಳ ಮೊದಲೇ ಬಿಗಿ ಡಿಜಿಟಲ್ ಟಿವಿ ಡಿಟಿಎಚ್ ತನ್ನ ಟಾರಿಫ್ ಯೋಜನೆಗಳನ್ನು ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.

ಅದಾಗ್ಯೂ, ಇದರ ಕುರಿತಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಕಂಪನಿ ಮೂಲಗಳು ನಿರಾಕರಿಸಿವೆ.
ಮತ್ತಷ್ಟು
ಯೂರಿಯಾಗೆ ನೂತನ ದರ ನೀತಿ
ರೈಲ್ವೇಯಿಂದ ಅಗ್ನಿಶಮನ ತಂತ್ರಜ್ಞಾನ ಮೇಲ್ದರ್ಜೆ
ಆರ್ಥಿಕ ಸಲಹಾಗಾರ ರಂಗರಾಜನ್ ರಾಜೀನಾಮೆ
ವಿಶ್ವದಲ್ಲಿ ತೈಲ ಬಿಕ್ಕಟ್ಟು ಉಂಟಾಗಲಿದೆ: ವರದಿ
ಹಣದುಬ್ಬರ ಶೇ.12.1ಕ್ಕೇರಿಕೆ : 13 ವರ್ಷಗಳಲ್ಲೇ ಗರಿಷ್ಠ
ಚೆನ್ನೈನಲ್ಲಿ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ