ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇ ಆದಾಯದಲ್ಲಿ ಶೇ.21.14 ಹೆಚ್ಚಳ
ಏಪ್ರಿಲ್ ಒಂದರಿಂದ ಜುಲೈ 31ರವರೆಗಿನ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ರೈಲ್ವೇಯು 26,397.04 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಯ 21,791.20 ಕೋಟಿ ರೂಪಾಯಿ ಆದಾಯಕ್ಕೆ ಹೋಲಿಸಿದರೆ, ರೈಲ್ವೇ ಆದಾಯದಲ್ಲಿ ಶೇ.21.14ರಷ್ಟು ಹೆಚ್ಚಳ ಉಂಟಾಗಿದೆ.

ರೈಲ್ವೇ ಸಾಗಾಣಿಕಾ ಆದಾಯವೂ ಶೇ.24.68ರಷ್ಟು ಹೆಚ್ಚಳಗೊಂಡಿದ್ದು, ಈ ಅವಧಿಯಲ್ಲಿ ಸಾಗಾಣಿಕಾ ವ್ಯವಹಾರದಲ್ಲಿ ರೈಲ್ವೇಯು 18,187.71 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ ವರ್ಷದ ಇದು 14,587.55 ರೂಪಾಯಿಗಳಷ್ಟಿತ್ತು.

2008-09ನೇ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಒಟ್ಟು ಪ್ರಯಾಣಿಕರ ಆದಾಯವು 7207.33 ಕೋಟಿ ರೂಪಾಯಿಗಳಾಗಿದ್ದು, ಶೇ.13.84ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಪ್ರಯಾಣಿಕರ ಆದಾಯವು 6331.17 ಕೋಟಿ ರೂಪಾಯಿಗಳಾಗಿತ್ತು.

ಅಲ್ಲದೆ, ಏಪ್ರಿಲ್ - ಜೂನ್ ತಿಂಗಳ ಅವಧಿಯಲ್ಲಿ ರೈಲ್ವೇಯ ಇತರ ಆದಾಯವು ಕಳೆದ ವರ್ಷದ 260.61 ಕೋಟಿ ರೂಪಾಯಿಗಳಿಂದ 342.82 ಕೋಟಿ ರೂಪಾಯಿಗಳಿಗೆ ಏರಿದ್ದು, ಈ ಮೂಲಕ ತನ್ನ ಇತರ ಆದಾಯದಲ್ಲಿ ಶೇ.31.55ರಷ್ಟು ಏರಿಕೆ ಉಂಟಾಗಿದೆ.

ಈ ಅವಧಿಯಲ್ಲಿ ಒಟ್ಟು 2341.03 ದಶಲಕ್ಷ ಮಂದಿ ಟಿಕೆಟ್ ಬುಕ್ ಮಾಡಿದ್ದು, ಕಳೆದ ವರ್ಷ ಇದರ ಪ್ರಮಾಣವು 2206.69 ದಶಲಕ್ಷ ಮಿಲಿಯನ್ ಆಗಿತ್ತು. ಈ ಮೂಲಕ ಇದರಲ್ಲೂ ಶೇ.6.9ರಷ್ಟು ಹೆಚ್ಚಳವಾಗಿದೆ.
ಮತ್ತಷ್ಟು
ಎಸ್‌ಬಿಐ ಖೋಟಾನೋಟು ಹಗರಣ: ತನಿಖೆಗೆ ಸಿದ್ಧತೆ
ಆಗಸ್ಟ್ 15: ರಿಲಯನ್ಸ್‌ನಿಂದ ಡಿಟಿಎಚ್‌ ಸೇವೆ
ಯೂರಿಯಾಗೆ ನೂತನ ದರ ನೀತಿ
ರೈಲ್ವೇಯಿಂದ ಅಗ್ನಿಶಮನ ತಂತ್ರಜ್ಞಾನ ಮೇಲ್ದರ್ಜೆ
ಆರ್ಥಿಕ ಸಲಹಾಗಾರ ರಂಗರಾಜನ್ ರಾಜೀನಾಮೆ
ವಿಶ್ವದಲ್ಲಿ ತೈಲ ಬಿಕ್ಕಟ್ಟು ಉಂಟಾಗಲಿದೆ: ವರದಿ