ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ಪ್ರವಾಸಿಗರನ್ನು ಸೆಳೆಯದ ಒಲಿಂಪಿಕ್ಸ್
ಬೀಜಿಂಗ್‌ನಲ್ಲಿ ಶುಕ್ರವಾರ ಒಲಿಂಪಿಕ್ ಕ್ರೀಡಾಜ್ಯೋತಿ ಕಾಂತಿಯುತವಾಗಿ ಪ್ರಜ್ವಲಿಸಿರಬಹುದು, ಆದರೆ, ಭಾರತದ ಪ್ರವಾಸಿಗರನ್ನು ಸೆಳೆಯಲು ಬೀಜಿಂಗ್ ಒಲಿಂಪಿಕ್ ವಿಫಲವಾಗಿದೆ.

ಬೀಜಿಂಗ್ ಒಲಿಂಪಿಕ್‌ಗಾಗಿ ಯಾವುದೇ ವಿಶೇಷ ಪ್ಯಾಕೇಜ್‌ಗಳನ್ನು ರೂಪಿಸಿಲ್ಲ ಎಂದು ಹೆಚ್ಚಿನ ಪ್ರವಾಸಿ ನಿರ್ವಾಹಕರು ಹೇಳುತ್ತಾರೆ.

ವಿಶ್ವದ ಯಾವುದೇ ಭಾಗದಲ್ಲೂ ಕ್ರಿಕೆಟ್ ಪಂದ್ಯವಿದ್ದಲ್ಲಿ ಭಾರತೀಯ ಪ್ರವಾಸಿಗರಲ್ಲಿರುವ ಉತ್ಸಾಹ ಮತ್ತು ಆಸಕ್ತಿಯು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿಲ್ಲ ಎಂದು ಕಾಕ್ಸ್ ಆಂಡ್ ಕಿಂಗ್‌ನ ವ್ಯವಹಾರ ಅಭಿವೃದ್ಧಿಯ ಮುಖ್ಯಸ್ಥ ಕರಣ್ ಆನಂದ್ ತಿಳಿಸಿದ್ದಾರೆ.

ಈ ಕ್ರೀಡಾಕೂಟಕ್ಕೆ ತೆರಳುವ ಕುರಿತು ಭಾರತೀಯ ಪ್ರವಾಸಿಗರಲ್ಲಿ ಯಾವುದೇ ಆಸಕ್ತಿ ಇಲ್ಲದಿರುವ ಹಿನ್ನೆಲೆಯಲ್ಲಿ, ಟ್ರಾವೆಲ್ ಸಂಸ್ಥೆಗಳು ಯಾವುದೇ ವಿಶೇಷ ಪ್ಯಾಕೇಜ್‌ಗಳನ್ನು ಪ್ರಾರಂಭಿಸಲಿಲ್ಲ. ನಿಯಮಿತ ಶಾಂಘೈ-ಬೀಜಿಂಗ್ 51,000 ರೂಪಾಯಿ ವೆಚ್ಚದ ಆರು ಹಗಲು ಐದು ರಾತ್ರಿ ಪ್ರವಾಸವಷ್ಟೇ ಇದೆ ಎಂದು ಕರಣ್ ಹೇಳಿದ್ದಾರೆ.

ಶುಕ್ರವಾರ ಪ್ರಾರಂಭಗೊಂಡ ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸುಮಾರು 4.5ರಿಂದ 5.5 ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಭಾರತೀಯರು ಚೀನಾಗೆ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಪ್ರಯಾಣ ಬೆಳೆಸುತ್ತಾರೆ. ವಾರ್ಷಿಕವಾಗಿ, ಭಾರತದಿಂದ ಎರಡು ಲಕ್ಷ ಮಂದಿ ಚೀನಾಗೆ ಪ್ರವಾಸ ಹೋಗುತ್ತಾರೆ ಎಂದು ಅಂದಾಜಿಸಲಾಗಿದೆ.
ಮತ್ತಷ್ಟು
ರೈಲ್ವೇ ಆದಾಯದಲ್ಲಿ ಶೇ.21.14 ಹೆಚ್ಚಳ
ಎಸ್‌ಬಿಐ ಖೋಟಾನೋಟು ಹಗರಣ: ತನಿಖೆಗೆ ಸಿದ್ಧತೆ
ಆಗಸ್ಟ್ 15: ರಿಲಯನ್ಸ್‌ನಿಂದ ಡಿಟಿಎಚ್‌ ಸೇವೆ
ಯೂರಿಯಾಗೆ ನೂತನ ದರ ನೀತಿ
ರೈಲ್ವೇಯಿಂದ ಅಗ್ನಿಶಮನ ತಂತ್ರಜ್ಞಾನ ಮೇಲ್ದರ್ಜೆ
ಆರ್ಥಿಕ ಸಲಹಾಗಾರ ರಂಗರಾಜನ್ ರಾಜೀನಾಮೆ