ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ, ರಿಲಯನ್ಸ್, ಏರ್‌ಟೆಲ್ ಉನ್ನತ ಬ್ರಾಂಡ್‌
ಟಾಟಾ ರಿಲಯನ್ಸ್ ಅನಿಲ್ ಧೀರೂಬಾಯ್ ಅಂಬಾನಿ ಸಮೂಹ ಮತ್ತು ಏರ್‌ಟೆಲ್ ಭಾರತದಲ್ಲಿನ ಮೂರು ಉನ್ನತ ದರ್ಜೆಯ ಬ್ರಾಂಡ್‌ಗಳಾಗಿವೆ ಎಂದು 4ಪಿ ವ್ಯವಹಾರ ಮತ್ತು ಮಾರುಕಟ್ಟೆ ನಿಯತಕಾಲಿಕವು ತನ್ನ ವಾರ್ಷಿಕ ರ‌್ಯಾಂಕಿಂಗ್ ಪಟ್ಟಿಯಲ್ಲಿ ತಿಳಿಸಿದೆ.

ಮೊದಲ ಹತ್ತು ಉನ್ನತ ದರ್ಜೆಯ ಬ್ರಾಂಡ್‌ಗಳ ಪಟ್ಟಿಯಲ್ಲಿ ಮಾರುತಿ, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ, ಇನ್ಫೋಸಿಸ್, ಹೀರೋಹೋಂಡಾ, ಟೈಮ್ಸ್ ಆಫ್ ಇಂಡಿಯಾ ಮತ್ತು ಮ್ಯಾಗಿ ಸೇರಿದೆ.

ಕಳೆದ ವರ್ಷ 52ನೇ ಸ್ಥಾನದಲ್ಲಿದ್ದ ಡೆಟ್ಟಾಲ್ ಈ ಬಾರಿ 16ನೇ ಸ್ಥಾನವನ್ನು ಪಡೆದುಕೊಂಡಿದ್ದು, ಸ್ಯಾಮ್‌ಸಂಗ್, 26ನೇ ಸ್ಥಾನದಿಂದ 45ನೇ ಸ್ಥಾನಕ್ಕಿಳಿದಿದೆ.

ಸಿಎನ್‌ಬಿಸಿ ಟಿವಿ 18, ಆಪಲ್, ಯಮಾಹಾ, ಫೆವಿಕಾಲ್, ಸ್ಕೋಡಾ, ಪೆಪ್ಸೋಡೆಂಟ್ ಮತ್ತು ಸೋನಿ ಎಂಟರ್ಟೈನ್‌ಮೆಂಟ್ ಟೆಲಿವಿಶನ್ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಹತ್ತು ನಗರಗಳಲ್ಲಿ ಸುಮಾರು 6,252 ಮಂದಿಯ ಸಂದರ್ಶನದ ಮೂಲಕ ಮಾರುಕಟ್ಟೆ ಸಂಶೋಧನೆಯ ಭಾರತೀಯ ಸಮಿತಿಯು ಈ ‌ರ‌್ಯಾಂಕಿಂಗ್‌ನ್ನು ನಿರ್ಧರಿಸಲಾಗಿತ್ತು.
ಮತ್ತಷ್ಟು
ಭಾರತೀಯ ಪ್ರವಾಸಿಗರನ್ನು ಸೆಳೆಯದ ಒಲಿಂಪಿಕ್ಸ್
ರೈಲ್ವೇ ಆದಾಯದಲ್ಲಿ ಶೇ.21.14 ಹೆಚ್ಚಳ
ಎಸ್‌ಬಿಐ ಖೋಟಾನೋಟು ಹಗರಣ: ತನಿಖೆಗೆ ಸಿದ್ಧತೆ
ಆಗಸ್ಟ್ 15: ರಿಲಯನ್ಸ್‌ನಿಂದ ಡಿಟಿಎಚ್‌ ಸೇವೆ
ಯೂರಿಯಾಗೆ ನೂತನ ದರ ನೀತಿ
ರೈಲ್ವೇಯಿಂದ ಅಗ್ನಿಶಮನ ತಂತ್ರಜ್ಞಾನ ಮೇಲ್ದರ್ಜೆ