ಆಗಸ್ಟ್ 13ರಂದು ಸಾರ್ವಜನಿಕ ವಲಯದ ಬ್ಯಾಂಕ್ ಮುಖ್ಯಸ್ಥರೊಂದಿಗೆ ಹಣಕಾಸು ಸಚಿವ ಪಿ.ಚಿದಂಬರಂ ಸಭೆ ನಡೆಸಲಿದ್ದು, 71,680 ಕೋಟಿ ರೂಪಾಯಿಗಳ ಸಾಲ ಮನ್ನಾ ಯೋಜನೆಯ ವರಿದಗಳನ್ನು ಈ ವೇಳೆ ಹಣಕಾಸು ಸಚಿವರು ಸ್ವೀಕರಿಸಲಿದ್ದಾರೆ. ಇದರೊಂದಿಗೆ, ಇತ್ತೀಚಿನ ಬಡ್ಡಿದರ ಏರಿಕೆಯ ಬಗ್ಗೆ ಈ ಸಭೆಯಲ್ಲಿ ವಿಮರ್ಷೆ ನಡೆಸುವ ಸಾಧ್ಯತೆ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ 29ರಂದು ಹಣಕಾಸು ನೀತಿ ವಿಮರ್ಷೆ ನಡೆಸಿದ ನಂತರ ಮೊದಲ ಬಾರಿಗೆ ಚಿದಂಬರಂ ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತಿದ್ದಾರೆ.
ತನ್ನ ಹಣಕಾಸು ನೀತಿ ವಿಮರ್ಷೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ದರವನ್ನು ಶೇ.9ರಷ್ಟು ಏರಿಸಿದ್ದ ಹಿನ್ನೆಲೆಯಲ್ಲಿ, ಹೆಚ್ಚಿನ ಪಿಎಸ್‌ಯು ಬ್ಯಾಂಕ್‌ಗಳು ಬಡ್ಡಿದರವನ್ನು 50-100 ಅಂಶಗಳಷ್ಟು ಹೆಚ್ಚಿಸಿದ್ದವು.
ಪಿಎಸ್‌ಯು ಬ್ಯಾಂಕ್‌ಗಳೊಂದಿಗಿನ ಸಭೆಯ ದಿನಾಂಕವನ್ನು ಹಣಕಾಸು ಸಚಿವರು ಸೂಚಿಸಿದ್ದರೂ, ಸಭೆಯ ಕಾರ್ಯಸೂಚಿಯ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
|