ಹೆಚ್ಚುತ್ತಿರುವ ಕಚ್ಚಾಸಾಮಾಗ್ರಿ ಬೆಲೆಯಿಂದಾಗಿ ಉಂಟಾಗುತ್ತಿರುವ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ, ಭಾರತದ ಪ್ರಮುಖ ಮೋಟಾರ್‌ಬೈಕ್ ನಿರ್ಮಾಣ ಸಂಸ್ಥೆ ಹೀರೋ ಹೋಂಡಾ ಮೋಟಾರ್ಸ್, ತನ್ನ ಕೆಲವು ಮಾಡೆಲ್‌ಗಳ ಬೆಲೆಯನ್ನು ಹೆಚ್ಚಳಗೊಳಿಸಿದೆ ಎಂದು ಕಂಪನಿ ತಿಳಿಸಿದೆ.
ಪ್ರಾರಂಭಿಕ ಹಂತದ 100 ಸಿಸಿ ಮೋಟಾರ್‌ಬೈಕ್‌ನ ಬೆಲೆಯನ್ನು 850 ರೂಪಾಯಿಗಳಷ್ಟು ಹೆಚ್ಚಿಸಲಾಗಿದ್ದು, ಇತರ ಮಾಡೆಲ್‌ಗಳಲ್ಲಿನ ಬೆಲೆ ಹೆಚ್ಚಳದ ವಿವರಗಳನ್ನು ಕಂಪನಿ ನೀಡಿಲ್ಲ.
ಜಪಾನಿನ ಹೋಂಡಾ ಮೋಟಾರ್ಸ್ ಕಂಪನಿ ಮತ್ತು ಭಾರತದ ಹೀರೋ ಹೋಂಡಾ ಕಂಪೆನಿಗಳು, ಹೀರೋ ಹೋಂಡಾದಲ್ಲಿ ಪರಸ್ಪರ ಶೇ.26ರಷ್ಟು ಪಾಲನ್ನು ಹೊಂದಿದೆ.
ಸ್ಟೀಲ್ ಮುಂತಾದ ಕಚ್ಚಾವಸ್ತುಗಳ ಬೆಲೆಯಲ್ಲಿನ ಏರಿಕೆಯಿಂದಾಗಿ ಭಾರತದ ವಾಹನ ತಯಾರಕರು ತಮ್ಮ ವಾಹನಗಳ ಬೆಲೆಯನ್ನು ಇತ್ತೀಚೆಗೆ ಶೇ.3ರಷ್ಟು ಹೆಚ್ಚಿಸಿದ್ದರು.
ಇದರೊಂದಿಗೆ, ಬಡಡಿದರ ಹೆಚ್ಚಳ, ಹೆಚ್ಚಿದ ಇಂಧನ ಬೆಲೆ ಮುಂತಾದವುಗಳಿಂದಾಗಿ ಭಾರತದಲ್ಲಿ ವಾಹನ ಮಾರಾಟದ ಪ್ರಮಾಣದಲ್ಲಿಯೂ ಇಳಿಕೆ ಉಂಟಾಗುತ್ತಿದೆ.
|