ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ನಾಟಕದಲ್ಲಿ ಹೂಡಿಕೆಗೆ ಹಿಂದೂಜಾ ಆಸಕ್ತಿ
ವಿವಿಧ ಯೋಜನೆಗಳಿಗಾಗಿ ಕರ್ನಾಟಕದಲ್ಲಿ ಸುಮಾರು 1,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಹಿಂದೂಜಾ ಗ್ರೂಪ್ ಆಫ್ ಕಂಪನಿಯು ಆಸಕ್ತಿ ಹೊಂದಿದೆ.

ಹಿಂದೂಜಾ ಗ್ರೂಪ್ ಇಂಡಿಯಾದ ಮುಖ್ಯಸ್ಥ ಅಶೋಕ್ ಪಿ.ಹಿಂದೂಜಾ ಮತ್ತು ಹಿಂದೂಜಾ ಸಮೂಹ ಕಂಪನಿಯ ಅಧ್ಯಕ್ಷ ಧೀರಜ್ ಹಿಂದೂಜಾ ಈ ವಿಚಾರವನ್ನು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಿಳಿಸಿದ್ದು, ವಿದ್ಯುತ್ ಉತ್ಪಾದನೆ, ವಿಮಾನ ನಿಲ್ದಾಣ ನಿರ್ಮಾಣ, ಪ್ರವಾಸೋದ್ಯಮ ಯೋಜನೆ ಮುಂತಾದವುಗಳಲ್ಲಿ ತಮ್ಮ ಹೂಡಿಕೆಯ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಮೂಲ ಸೌಕರ್ಯ ಯೋಜನೆಗಳಾದ ಉದ್ಯಮ, ವಿದ್ಯುತ್, ಪ್ರವಾಸೋದ್ಯಮ ಅಭಿವೃದ್ಧಿ ಮುಂತಾದವುಗಳಲ್ಲಿ ಬಂಡವಾಳ ಹೂಡಲು ಸಿದ್ಧವಾಗಿರುವುದಾಗಿ ಹಿಂದೂಜಾ ತಿಳಿಸಿದ್ದು, ಹಿಂದೂಜಾ ಮನವಿಗೆ ಮುಖ್ಯಮಂತ್ರಿಗಳು ಧನಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಬಂಡವಾಳ ಹೂಡಿಕೆಗಾಗಿ ಎಲ್ಲಾ ಬೆಂಬಲ ಮತ್ತು ಸಹಕಾರವನ್ನು ನೀಡಲು ಸರಕಾರವು ಸಿದ್ಧವಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಯಲಹಂಕದ ಬಳಿಯಲ್ಲಿ ಅಂತಾರಾಷ್ಟ್ರೀಯ ಕನ್ವೆಂನ್ಶನ್ ಕೇಂದ್ರವನ್ನು ನಿರ್ಮಿಸಲು ಹಿಂದೂಜಾ ಗ್ರೂಪ್ ಯೋಜನೆ ಹೊಂದಿದ್ದು, ಇದನ್ನು ತಾನು ಬೆಂಬಲಿಸುವುದಾಗಿ ಸರಕಾರ ಹೇಳಿದೆ.

ಈ ಕುರಿತಾಗಿ ಮಾತುಕತೆ ನಡೆಸಲು ಹಿಂದೂಜಾ ಪ್ರತಿನಿಧಿಗಳ ತಂಡವು ಸದ್ಯದಲ್ಲಿಯೇ ರಾಜ್ಯಕ್ಕೆ ಭೇಟಿ ನೀಡಲಿದ್ದು, ಸರಕಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ.
ಮತ್ತಷ್ಟು
ಹೀರೋಹೋಂಡಾದಿಂದ ಬೈಕ್ ದರ ಏರಿಕೆ
ಆಗಸ್ಟ್ 13ರಂದು ಪಿಎಸ್‌ಯು ಬ್ಯಾಂಕ್‌ಗಳೊಂದಿಗೆ ಸಭೆ
ಟಾಟಾದೊಂದಿಗೆ ಮಾತುಕತೆಗೆ ಮಮತಾ ಸಿದ್ಧ
ಟಾಟಾ, ರಿಲಯನ್ಸ್, ಏರ್‌ಟೆಲ್ ಉನ್ನತ ಬ್ರಾಂಡ್‌
ಭಾರತೀಯ ಪ್ರವಾಸಿಗರನ್ನು ಸೆಳೆಯದ ಒಲಿಂಪಿಕ್ಸ್
ರೈಲ್ವೇ ಆದಾಯದಲ್ಲಿ ಶೇ.21.14 ಹೆಚ್ಚಳ