ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2ಬಿಲಿಯನ್ ಬಂಡವಾಳ ಹೂಡಲು ಟಾಟಾ ಸಿದ್ಧತೆ
ಜಿಎಸ್ಎಂ ಆಧಾರಿತ ಮೊಬೈಲ್ ಫೋನ್ ಸೇವೆಯನ್ನು ಪ್ರಾರಂಭಿಸಲು ಮತ್ತು ತನ್ನ ಪ್ರಸಕ್ತ ಸಿಡಿಎಂಎ ಫೋನ್ ಸೇವೆಯ ನೆಟ್ವರ್ಕ್‌ನ್ನು ವೃದ್ಧಿಸಲು ಟಾಟಾ ಟೆಲಿಸರ್ವೀಸ್ ಎರಡು ಶತಕೋಟಿ ಡಾಲರ್ ಬಂಡವಾಳ ಹೂಡಲು ನಿರ್ಧರಿಸಿದ್ದು, ಇದು ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡುವುದರ ಜೊತೆಗೆ ಮೊಬೈಲ್ ಫೋನ್ ಬೆಲೆಯನ್ನು ಕಡಿಮೆಗೊಳಿಸುವ ಸಾಧ್ಯತೆಯೂ ಇದೆ.

ಕಂಪನಿಯು ಜಿಎಸ್ಎಂ ಸೇವೆಗಾಗಿ 1.5 ಶತಕೋಟಿ ಡಾಲರ್ ಮತ್ತು ಸಿಡಿಎಂಎ ಸೇವೆಗಾಗಿ 500 ದಶಲಕ್ಷ ಡಾಲರ್ ಬಂಡವಾಳ ಹೂಡಲಿದೆ ಎಂದು ಟಾಟಾಟೆಲಿ ಸರ್ವೀಸ್‌ನ ಆಡಳಿತ ನಿರ್ದೇಶಕ ಅನಿಲ್ ಸರ್ದಾನಾ ತಿಳಿಸಿದ್ದಾರೆ.

ಚಂದಾದಾರ ಆಧಾರದಲ್ಲಿ ಮೊಬೈಲ್ ಫೋನ್ ಸೇವಾ ಸರಬರಾಜು ಸಂಖ್ಯೆಯಲ್ಲಿ ಪ್ರಸಕ್ತ ಆರನೇ ಸ್ಥಾನವನ್ನು ಪಡೆದುಕೊಂಡಿರುವ ಟಾಟಾಟೆಲಿ ಸರ್ವೀಸ್‌ಗೆ ಪ್ರಸ್ತಾಪಿತ ಜಿಎಸ್ಎಂ ಪ್ರಾರಂಭವು ಅನಿವಾರ್ಯವಾಗಿದೆ.

ಈ ವರ್ಷದ ಅಂತ್ಯದೊಳಗೆ ಆರು ವಲಯಗಳಲ್ಲಿ ಜಿಎಸ್ಎಂ ಆಧಾರಿತ ಸೇವೆಯನ್ನು ಪ್ರಾರಂಭಿಸಲು ಕಂಪನಿಗೆ ಸ್ಪೆಕ್ಟ್ರಂ ದೊರಕಿದೆ.
ಮತ್ತಷ್ಟು
ಕರ್ನಾಟಕದಲ್ಲಿ ಹೂಡಿಕೆಗೆ ಹಿಂದೂಜಾ ಆಸಕ್ತಿ
ಹೀರೋಹೋಂಡಾದಿಂದ ಬೈಕ್ ದರ ಏರಿಕೆ
ಆಗಸ್ಟ್ 13ರಂದು ಪಿಎಸ್‌ಯು ಬ್ಯಾಂಕ್‌ಗಳೊಂದಿಗೆ ಸಭೆ
ಟಾಟಾದೊಂದಿಗೆ ಮಾತುಕತೆಗೆ ಮಮತಾ ಸಿದ್ಧ
ಟಾಟಾ, ರಿಲಯನ್ಸ್, ಏರ್‌ಟೆಲ್ ಉನ್ನತ ಬ್ರಾಂಡ್‌
ಭಾರತೀಯ ಪ್ರವಾಸಿಗರನ್ನು ಸೆಳೆಯದ ಒಲಿಂಪಿಕ್ಸ್