ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜುಲೈಯಲ್ಲಿ ಕಾರು ಮಾರಾಟ ಶೇ.1.71ರಷ್ಟು ಇಳಿಕೆ
ಜುಲೈ ತಿಂಗಳಲ್ಲಿ ದೇಶೀಯ ಕಾರು ಮಾರಾಟದಲ್ಲಿ ಶೇ.1.71ರಷ್ಟು ಇಳಿಕೆ ಉಂಟಾಗಿದ್ದು, ಈ ಅವಧಿಯಲ್ಲಿ ಒಟ್ಟು 87,724 ಕಾರುಗಳು ಮಾರಾಟಗೊಂಡಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 89,250 ಕಾರುಗಳ ಮಾರಾಟವಾಗಿತ್ತು.

ಭಾರತೀಯ ಆಟೋಮೊಬೈಲ್ ನಿರ್ಮಾಪಕರ ಸಂಘ(ಎಸ್ಐಎಎಂ)ದ ವರದಿಗಳ ಪ್ರಕಾರ, ಜುಲೈ ತಿಂಗಳ ಅವಧಿಯಲ್ಲಿ 4,57,178 ಮೋಟಾರ್ ಸೈಕಲ್ ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯ 3,75,004 ಮೋಟಾರ್ ಸೈಕಲ್ ಮಾರಾಟಕ್ಕೆ ಹೋಲಿಸಿದರೆ, ಇದರಲ್ಲಿ ಶೇ.21.91ರಷ್ಟು ಹೆಚ್ಚಳ ಉಂಟಾಗಿದೆ.

ಜುಲೈ ತಿಂಗಳಲ್ಲಿ ಒಟ್ಟು ದ್ವಿಚಕ್ರ ವಾಹನದ ಪ್ರಮಾಣದಲ್ಲಿ ಶೇ.19.47ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಒಟ್ಟು 5,01,691 ಯೂನಿಟ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಈ ವರ್ಷ 5,99,369ಕ್ಕೆ ಏರಿದೆ.

ಜುಲೈ ತಿಂಗಳ ಅವಧಿಯಲ್ಲಿ 34,359 ವಾಣಿಜ್ಯ ವಾಹನಗಳು ಮಾರಾಟಗೊಂಡಿದ್ದು, ಶೇ.1.93ರಷ್ಟು ಹೆಚ್ಚಳ ಉಂಟಾಗಿದೆ. ಕಳೆದ ವರ್ಷ 33,709 ವಾಣಿಜ್ಯ ಉಪಯೋಗಿ ವಾಹನಗಳ ಮಾರಾಟವಾಗಿತ್ತು ಎಂದು ಎಸ್ಐಎಎಂ ಹೇಳಿದೆ.
ಮತ್ತಷ್ಟು
2ಬಿಲಿಯನ್ ಬಂಡವಾಳ ಹೂಡಲು ಟಾಟಾ ಸಿದ್ಧತೆ
ಕರ್ನಾಟಕದಲ್ಲಿ ಹೂಡಿಕೆಗೆ ಹಿಂದೂಜಾ ಆಸಕ್ತಿ
ಹೀರೋಹೋಂಡಾದಿಂದ ಬೈಕ್ ದರ ಏರಿಕೆ
ಆಗಸ್ಟ್ 13ರಂದು ಪಿಎಸ್‌ಯು ಬ್ಯಾಂಕ್‌ಗಳೊಂದಿಗೆ ಸಭೆ
ಟಾಟಾದೊಂದಿಗೆ ಮಾತುಕತೆಗೆ ಮಮತಾ ಸಿದ್ಧ
ಟಾಟಾ, ರಿಲಯನ್ಸ್, ಏರ್‌ಟೆಲ್ ಉನ್ನತ ಬ್ರಾಂಡ್‌