ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೈಗಾರಿಕಾ ಅಭಿವೃದ್ಧಿ ದರ ಶೇ.5.4ಕ್ಕೇರಿಕೆ
ಮೇ ತಿಂಗಳಲ್ಲಿ ಶೇ.3.8ರಷ್ಟಿದ್ದ ಕೈಗಾರಿಕಾ ಉತ್ಪಾದನಾ ಅಭಿವೃದ್ಧಿ ದರವು ಜೂನ್ ತಿಂಗಳಲ್ಲಿ ಶೇ.5.4ಕ್ಕೆ ಏರಿಕೆಗೊಂಡಿದೆ ಎಂದು ಸರಕಾರ ತಿಳಿಸಿದೆ.

ಅದಾಗ್ಯೂ, ಕಳೆದ ವರ್ಷದ ಶೇ.8.9 ಅಭಿವೃದ್ಧಿ ದರಕ್ಕೆ ಹೋಲಿಸಿದರೆ, ಪ್ರಸಕ್ತ ಅವಧಿಯ ಕೈಗಾರಿಕಾ ಉತ್ಪಾದನಾ ಅಭಿವೃದ್ಧಿ ದರದಲ್ಲಿ ಇಳಿಕೆ ಉಂಟಾಗಿದೆ.

ಏಪ್ರಿಲ್-ಮೇ ತಿಂಗಳ ಹಣಕಾಸು ಅವಧಿಯಲ್ಲಿ ಕೈಗಾರಿಕಾ ಕ್ಷೇತ್ರವು ಶೇ.5.2ರಷ್ಟು ಅಭಿವೃದ್ಧಿ ಹೊಂದಿದ್ದು, ಕಳೆದ ವರ್ಷದ ಹಣಕಾಸು ವರ್ಷದಲ್ಲಿ ಇದು ಶೇ.10.3ರಷ್ಟಿತ್ತು ಎಂದು ಅಂಕಿಅಂಶ ಸಚಿವಾಲಯ ಬಿಡುಗಡೆಗೊಳಿಸಿದ ಔದ್ಯಮಿಕ ಉತ್ಪಾದನೆಗಳ ಸೂಚ್ಯಂಕ(ಐಐಪಿ) ವರದಿಗಳು ತಿಳಿಸಿವೆ.

ಜೂನ್ ತಿಂಗಳಲ್ಲಿ ಮೈನಿಂಗ್, ಉತ್ಪಾದನೆ ಹಾಗೂ ವಿದ್ಯುತ್ ಕ್ಷೇತ್ರಗಳು ಕ್ರಮವಾಗಿ ಶೇ.2.9, ಶೇ.5.9 ಮತ್ತು ಶೇ.2.6ರಷ್ಟು ಏರಿಕೆ ಕಂಡಿವೆ.
ಮತ್ತಷ್ಟು
ಕಚ್ಚಾವಸ್ತುಗಳ ಪ್ರಭಾವದಲ್ಲಿ ಸ್ಟೀಲ್ ಬೆಲೆ: ರತನ್ ಟಾಟಾ
ಎಸ್‌ಬಿಐನಿಂದ ಬಿಪಿಎಲ್ಆರ್ ದರ ಏರಿಕೆ
ಜುಲೈಯಲ್ಲಿ ಕಾರು ಮಾರಾಟ ಶೇ.1.71ರಷ್ಟು ಇಳಿಕೆ
2ಬಿಲಿಯನ್ ಬಂಡವಾಳ ಹೂಡಲು ಟಾಟಾ ಸಿದ್ಧತೆ
ಕರ್ನಾಟಕದಲ್ಲಿ ಹೂಡಿಕೆಗೆ ಹಿಂದೂಜಾ ಆಸಕ್ತಿ
ಹೀರೋಹೋಂಡಾದಿಂದ ಬೈಕ್ ದರ ಏರಿಕೆ