ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗಾಪುರ್ ಏರ್‌ಲೈನ್‌ಗೆ ಉತ್ತಮ ಏರ್‌ಲೈನ್ ಪ್ರಶಸ್ತಿ
2008ರ ಏರ್‌ಲೈನ್ ಪ್ರಶಸ್ತಿಯಲ್ಲಿ, ಸಿಂಗಾಪೂರ್ ಏರ್‌ಲೈನ್ ವಿಶ್ವದ ಅತ್ಯುತ್ತಮ ಏರ್‌ಲೈನ್ಸ್ ಪ್ರಶಸ್ತಿ ಪಡೆದುಕೊಂಡಿದೆ. ಕ್ಯಾಥೆ ಪೆಸಿಫಿಕ್ ಮತ್ತು ಕ್ವಾಂಟಾಸ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ ಎಂದು ವಾರ್ಷಿಕ ಸಮೀಕ್ಷೆಯು ತಿಳಿಸಿದೆ.

ಹತ್ತು ವರ್ಷಗಳಲ್ಲಿ ಮೂರನೇ ಬಾರಿಗೆ ಸಿಂಗಾಪುರ್ ಏರ್‌ಲೈನ್ಸ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಇದರೊಂದಿಗೆ, ಉತ್ತಮ ಬ್ಯುಸಿನೆಸ್ ಕ್ಲಾಸ್ ಪ್ರಶಸ್ತಿಯನ್ನೂ ಇದು ಪಡೆದುಕೊಂಡಿದೆ.

ಉತ್ತಮ ಫಸ್ಟ್ ಕ್ಲಾಸ್, ಉತ್ತಮ ಇಕಾನಮಿ ಕ್ಲಾಸ್ ಕೇಟರಿಂಗ್ ಮತ್ತು ಆಸ್ಟ್ರೇಲಿಯಾದ ಉತ್ತಮ ಏರ್‌ಲೈನ್ಸ್ ಹೆಗ್ಗಳಿಕೆಗೆ ಕ್ವಾಂಟಾಸ್ ಪಾತ್ರವಾಗಿದೆ.

ಲಂಡನ್ ಮೂಲದ ವಿಮಾನಯಾನ ಸಂಶೋಧನಾ ಸಂಸ್ಥೆ ಸ್ಕೈಟ್ರಾಕ್ಸ್ ವಿಶ್ವದಾದ್ಯಂತ 15 ದಶಲಕ್ಷ ಪ್ರಯಾಣಿಕರನ್ನು ಆಧರಿಸಿ ನಡೆಸಲಾದ ವಿಶ್ವದ ಅತಿ ದೊಡ್ಡ ಸಮೀಕ್ಷೆ ಮೂಲಕ ಈ ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ಆಸ್ಟ್ರೇಲಿಯನ್ ಮಾರ್ಗವನ್ನು ಮೇಲ್ದರ್ಜೆಗೇರಿಸಿದ ಅಬುದಾಬಿ ಮೂಲದ ಎತಿಹಾದ್ ಏರ್‌ವೇಸ್ ಮೊದಲ ಬಾರಿಗೆ ಹತ್ತನೇ ಸ್ಥಾನ ಪಡೆದುಕೊಂಡಿದೆ.
ಮತ್ತಷ್ಟು
ಕೈಗಾರಿಕಾ ಅಭಿವೃದ್ಧಿ ದರ ಶೇ.5.4ಕ್ಕೇರಿಕೆ
ಕಚ್ಚಾವಸ್ತುಗಳ ಪ್ರಭಾವದಲ್ಲಿ ಸ್ಟೀಲ್ ಬೆಲೆ: ರತನ್ ಟಾಟಾ
ಎಸ್‌ಬಿಐನಿಂದ ಬಿಪಿಎಲ್ಆರ್ ದರ ಏರಿಕೆ
ಜುಲೈಯಲ್ಲಿ ಕಾರು ಮಾರಾಟ ಶೇ.1.71ರಷ್ಟು ಇಳಿಕೆ
2ಬಿಲಿಯನ್ ಬಂಡವಾಳ ಹೂಡಲು ಟಾಟಾ ಸಿದ್ಧತೆ
ಕರ್ನಾಟಕದಲ್ಲಿ ಹೂಡಿಕೆಗೆ ಹಿಂದೂಜಾ ಆಸಕ್ತಿ