ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಪಿಎಲ್ ಕುಟುಂಬಗಳಿಗೆ ಮಾತ್ರವೇ ಸಬ್ಸಿಡಿ: ಚತುರ್ವೇದಿ ಸಮಿತಿ
ಸಬ್ಸಿಡಿ ದರದ ದೇಶೀಯ ಅಡುಗೆ ಅನಿಲ ಮತ್ತು ಸೀಮೆಎಣ್ಣೆಗೆ ಕೇವಲ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರವೇ ನೀಡಿ, ಉಳಿದವರಿಗೆ ಮಾರುಕಟ್ಟೆ ಬೆಲೆಯಲ್ಲಿಯೇ ಸೀಮೆಎಣ್ಣೆ ಮತ್ತು ಎಲ್‌ಪಿಜಿ ವಿತರಿಸುವಂತೆ ಉನ್ನತ ಅಧಿಕಾರದ ಬಿ.ಕೆ. ಚತುರ್ವೇದಿ ಸಮಿತಿಯು ಪ್ರಸ್ತಾಪಿಸಿದೆ.

ದೇಶೀಯ ಪೆಟ್ರೋಲಿಂ ಉತ್ಪನ್ನಗಳಾದ ಎಲ್‌‌ಪಿಜಿ ಮತ್ತು ಸೀಮೆಎಣ್ಣೆಗೆ ಸಹಾಯಧನವನ್ನು ಕೇವಲ ಬಿಪಿಎಲ್ ಕುಟುಂಬಗಳಿಗೆ ಮಾತ್ರವೇ ನೀಡಬೇಕು ಎಂದು ಬಿ.ಕೆ. ಚತುರ್ವೇದಿ ಸಮಿತಿಯ ವರದಿಗಳು ತಿಳಿಸಿವೆ.

ನಗರ ಮತ್ತು ಉಪನಗರಗಳ ಬಿಪಿಎಲ್ ಕುಟುಂಬಗಳಿಗೆ ಸೀಮೆಎಣ್ಣೆ ಸಹಾಯಧನಗಳನ್ನು ಪೂರೈಸಲು ಸ್ಮಾರ್ಟ್ ಕಾರ್ಡ್ ವಿತರಿಸಲು ಈ ಸಮಿತಿಯು ಸೂಚಿಸಿದೆ.

ಇದರೊಂದಿಗೆ, ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಇಂಧನ ಪೂರೈಕೆ ಮಾಡುವ ಬದಲು ಸೀಮೆಎಣ್ಣೆ ಖರೀದಿಸಲು ಬಿಪಿಎಲ್ ಕುಟುಂಬಗಳಿಗೆ ಬ್ಯಾಂಕಿಂಗ್ ಅಥವಾ ಅಂಚೆ ವಿಧಾನದ ಮೂಲಕ ಸಹಾಯಧನವನ್ನು ತಲುಪಿಸಲು ಈ ಸಮಿತಿಯು ಸಲಹೆ ನೀಡಿದೆ.
ಮತ್ತಷ್ಟು
ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಜ್ಯೋತಿಷ್ಯ ಮಾಲ್
ಸಮಾನತೆ ಉತ್ತೇಜನ ಡಬ್ಲ್ಯೂಟಿಒ ಗುರಿಯಾಗಲಿ: ನಾಥ್
ಸಿಂಗಾಪುರ್ ಏರ್‌ಲೈನ್‌ಗೆ ಉತ್ತಮ ಏರ್‌ಲೈನ್ ಪ್ರಶಸ್ತಿ
ಕೈಗಾರಿಕಾ ಅಭಿವೃದ್ಧಿ ದರ ಶೇ.5.4ಕ್ಕೇರಿಕೆ
ಕಚ್ಚಾವಸ್ತುಗಳ ಪ್ರಭಾವದಲ್ಲಿ ಸ್ಟೀಲ್ ಬೆಲೆ: ರತನ್ ಟಾಟಾ
ಎಸ್‌ಬಿಐನಿಂದ ಬಿಪಿಎಲ್ಆರ್ ದರ ಏರಿಕೆ